ಆ್ಯಪ್ನಗರ

ಮದ್ವೆ ಆಗ್ಬೇಕಂದ್ರೆ ಮೊದ್ಲು ತಂಬಾಕು ಬಿಡ್ಬೇಕು!

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರಿಗೆ ಹೀಗೊಂದು ಖಡಕ್‌ ನಿಯಮ!

Vijaya Karnataka Web 1 Jun 2017, 6:50 pm
ಸೂರತ್‌: ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ 59ನೇ ಸಾಮೂಹಿಕ ವಿವಾಹ ಕಾರ್ಯಕ್ರಮ ಜನವರಿ 28, 2018ರಂದು ಜರುಗಲಿದ್ದು, ತಂಬಾಕು ಸೇವನೆ ಮಾಡುವವರಿಗೆ ನಿಷೇಧ ಹೇರಿದೆ. ತಂಬಾಕು ಸೇವಿಸುವವರು ಸಾಮೂಹಿಕ ಮದುವೆಯಲ್ಲಿ ಪಾಲ್ಗೊಳ್ಳಬೇಕು ಎಂದಾದರೆ ತಂಬಾಕು ತ್ಯಜಿಸಿರಬೇಕು ಎಂಬ ನಿಯಮ ಜಾರಿ ಮಾಡಿದೆ.
Vijaya Karnataka Web want to get married first say no to tobacco
ಮದ್ವೆ ಆಗ್ಬೇಕಂದ್ರೆ ಮೊದ್ಲು ತಂಬಾಕು ಬಿಡ್ಬೇಕು!


59ನೇ ಸಾಮೂಹಿಕ ವಿವಾಹ ಕಾರ್ಯಕ್ರಮದ ನೋಂದಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಏಕೈಕ ನಿಯಮ ಎಂದರೆ ವರ ಯಾವುದೇ ವಿಧದ ತಂಬಾಕು ಉತ್ಪನ್ನಗಳನ್ನು ಸೇವಿಸಕೂಡದು. ಒಂದುವೇಳೆ ಈಗಾಗಲೇ ವರ ತಂಬಾಕು ಸೇವಿಸುತ್ತಿದ್ದರೆ, ಆತನ ಭಾವಿ ಪತ್ನಿಗೆ ತಂಬಾಕು ತ್ಯಜಿಸುವ ಭರವಸೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನ ಆರಂಭಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಸೌರಾಷ್ಟ್ರ ಸೇವಾ ಸಮಾಜ ಸೂರತ್ ಘಟಕದ ಅಧ್ಯಕ್ಷ ಕಾಂಜಿ ಭಲಾಲ ತಿಳಿಸಿದ್ದಾರೆ.

ಈ ಸಂಸ್ಥೆಗೆ ಸಾಮೂಹಿಕ ವಿವಾಹ ನಡೆಸಲು ಅನುದಾನ ನೀಡುತ್ತಿರುವ ಧೀರೂಬಾಯಿ ವಲ್ಲಭಬಾಯಿ ಕೊಟಡಿಯಾ ಇಂತಹ ಸಮಾಜಮುಖಿ ಕಾರ್ಯಗಳನ್ನು ಬೆಂಬಲಿಸುತ್ತಿದ್ದಾರೆ. ಇಂತಹ ನಿಯಮಗಳಿಂದ ಸಮಾಜದಲ್ಲಿ ತಂಬಾಕು ಸೇವನೆ ವಿರುದ್ಧ ಅರಿವು ಮೂಡಿಸಲು ಸಾಧ್ಯ. ಇಲ್ಲಿವರೆಗೆ 200 ಜೋಡಿಗಳು ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ 20 ವರರು ತಂಬಾಕು ಸೇವನೆ ಗೀಳಿಗೆ ಅಂಟಿಕೊಂಡವರಾಗಿದ್ದಾರೆ. ಎಲ್ಲರು ತಂಬಾಕು ತ್ಯಜಿಸುವ ವಾಗ್ದಾನ ನೀಡಿದ್ದರಿಂದ ನೋಂದಾವಣೆ ಮಾಡಿಕೊಳ್ಳಲಾಗಿದೆ ಎಂದು ಭಲಾಲ ಹೇಳಿದ್ದಾರೆ.
ಈ ಕುರಿತು ಐ ಆ್ಯಮ್ ಗುಜರಾತ್ ವರದಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ