ಆ್ಯಪ್ನಗರ

‘ನಮಾಮಿ ಗಂಗೆ’ಯಿಂದ ಗಂಗಾ ನದಿ ನೀರಿನ ಗುಣಮಟ್ಟ ಹೆಚ್ಚಳ: ಅಮಿತ್‌ ಶಾ

ಗಂಗೆಯ ಶುದ್ಧೀಕರಣಕ್ಕಾಗಿ ಕೇಂದ್ರ ಸರಕಾರ 28 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಅದರ ಅಡಿಯಲ್ಲಿ 310 ಯೋಜನೆಗಳನ್ನು ರೂಪಿಸಿ, ಸದ್ಯ 116 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

THE ECONOMIC TIMES 13 Mar 2020, 7:05 pm
ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ನಮಾಮಿ ಗಂಗೆ’ಯಿಂದಾಗಿ ಗಂಗಾ ನದಿ ನೀರಿನ ಗುಣಮಟ್ಟ ಉತ್ತಮಗೊಂಡಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.
Vijaya Karnataka Web Union Home Minister Amit Shah


ಗಂಗಾ ಆಮಂತ್ರಣ ಅಭಿಯಾನದಲ್ಲಿ ಭಾಗವಹಿಸಿದ್ದವರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಮುಖ ಹಾಗೂ ಪವಿತ್ರ ನದಿಗಳಲ್ಲಿ ಒಂದಾದ ಗಂಗೆಯ ಶುದ್ಧೀಕರಣ ಹಾಗೂ ಅದರ ಕವಲು ನದಿಗಳು ಮತ್ತು ದಡದ ಸ್ವಚ್ಛತೆಗೆ ಕೇಂದ್ರ ಸರಕಾರ ಒತ್ತು ನೀಡಿದ್ದರಿಂದ ಯಶಸ್ಸು ಸಾಧಿಸಲಾಗಿದೆ.

ದೇಶದ ಇತರ ನದಿಗಳನ್ನು ರಾಜ್ಯ ಸರಕಾರಗಳ ಸಹಯೋಗದಲ್ಲಿಇದೇ ರೀತಿ ಸ್ವಚ್ಛಗೊಳಿಸಲು ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾ ತಿಳಿಸಿದ್ದಾರೆ.

ಗಂಗೆಯ ಶುದ್ಧೀಕರಣಕ್ಕಾಗಿ ಕೇಂದ್ರ ಸರಕಾರ 28 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಅದರ ಅಡಿಯಲ್ಲಿ 310 ಯೋಜನೆಗಳನ್ನು ರೂಪಿಸಿ, ಸದ್ಯ 116 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್‌ ಅವರು , ಕಳೆದ ಐದು ವರ್ಷಗಳಿಂದ ನಾವು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ. ಪರಿಣಾಮ ವಿಶ್ವದ ಅತಿ ಶುದ್ಧವಾದ 10 ನದಿಗಳ ಪೈಕಿ ಗಂಗಾ ನದಿಗೆ ಕೂಡ ಸ್ಥಾನ ಸಿಕ್ಕಿದೆ ಎಂದರು.

ಉತ್ತರಾಖಂಡದಿಂದ ಪಶ್ಚಿಮ ಬಂಗಾಳದವರೆಗೆ ಗಂಗಾ ನದಿಯಲ್ಲಿ ದೋಣಿ ವಿಹಾರ ಸಾಹಸವನ್ನು ಒಂದು ತಿಂಗಳವರೆಗೆ ಗಂಗಾ ಆಮಂತ್ರಣ ಅಭಿಯಾನ ಅಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ