ಆ್ಯಪ್ನಗರ

ಸಿಜೆಐ ಮೇಲೆ ಒತ್ತಡವಿತ್ತು ಎಂದು ನಾವು ನಂಬಿದ್ದೆವು: ನ್ಯಾ. ಕುರಿಯನ್ ಜೋಸೆಫ್

ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ಮೇಲೆ ಬಾಹ್ಯ ಒತ್ತಡವಿತ್ತು. ಅವರನ್ನು ಹೊರಗಿನಿಂದ ನಿಯಂತ್ರಿಸಲಾಗುತ್ತಿತ್ತು ಎಂದು ನಾವು ನಂಬಿದ್ದೆವು. ಹೀಗಾಗಿ ಅವರ ವಿರುದ್ಧ ಸುದ್ದಿಗೋಷ್ಟಿ ನಡೆಸಬೇಕಾಯಿತು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದ್ದಾರೆ.

Vijaya Karnataka Web 3 Dec 2018, 2:55 pm
ಹೊಸದಿಲ್ಲಿ: ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ಮೇಲೆ ಬಾಹ್ಯ ಒತ್ತಡವಿತ್ತು. ಅವರನ್ನು ಹೊರಗಿನಿಂದ ನಿಯಂತ್ರಿಸಲಾಗುತ್ತಿತ್ತು ಎಂದು ನಾವು ನಂಬಿದ್ದೆವು. ಹೀಗಾಗಿ ಅವರ ವಿರುದ್ಧ ಸುದ್ದಿಗೋಷ್ಟಿ ನಡೆಸಬೇಕಾಯಿತು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದ್ದಾರೆ.
Vijaya Karnataka Web Kurian


ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು, ಸಿಜೆಐ ದೀಪಕ್ ಮಿಶ್ರಾ ಅವರು ಯಾವುದೋ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವೊಂದು ರಾಜಕೀಯ ಪೂರ್ವಾಗ್ರಹದ ಮೂಲಕ ಅವರು ಕೇಸ್‌ಗಳನ್ನು ಇತರ ನ್ಯಾಯಾಧೀಶರಿಗೆ ನೀಡುತ್ತಿದ್ದರು ಎಂದು ನಾವೆಲ್ಲ ಅಂದುಕೊಂಡಿದ್ದೆವು.

ಅವರಿಗೆ ಈ ಬಗ್ಗೆ ಹೇಳಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಬಾರದೇ ಹೋದಾಗ ಸುದ್ದಿಗೋಷ್ಟಿ ನಡೆಸುವುದು ಅನಿವಾರ್ಯವಾಯಿತು, ನ್ಯಾ. ಚಲಮೇಶ್ವರ್ ಸುದ್ದಿಗೋಷ್ಟಿಯ ಯೋಜನೆ ರೂಪಿಸಿದ್ದರು ಎಂದು ನ್ಯಾ. ಜೋಸೆಫ್ ತಿಳಿಸಿದ್ದಾರೆ.

ಜ. 12ರಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನ್ಯಾಯಧೀಶರುಗಳಾದ ಚಲಮೇಶ್ವರ್, ರಂಜನ್ ಗೊಗೊಯ್ ಮತ್ತು ಮದನ್ ಬಿ ಲೋಕೂರ್ ಸಹಿತ ಜೋಸೆಫ್ ಕುರಿಯನ್ ಸುದ್ದಿಗೋಷ್ಟಿ ನಡೆಸಿ ಆರೋಪ ಹೊರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ