ಆ್ಯಪ್ನಗರ

​ತೂಕ ಕಳೆಯುವ ಚಿಕಿತ್ಸೆಗೆ ಬಲಿಯಾಯಿತು ಮಹಿಳೆಯ ಬದುಕು

ಹೆಚ್ಚಿದ್ದ ದೇಹತೂಕವನ್ನು ಇಳಿಸಿಕೊಳ್ಳಲೆಂದು ಚಿಕಿತ್ಸೆ ಪಡೆದು ಎರಡು ತಿಂಗಳಿನಿಂದ ಲಿಂಬೆ ರಸ ಮತ್ತು ಬೆಲ್ಲದ ಮಿಶ್ರಣವನ್ನೇ ಸೇವಿಸುತ್ತಿದ್ದ ಮಹಿಳೆ ಈಗ ಮಾತು, ನಡೆಯುವುದು, ಸರಿಯಾಗಿ ಕುಳಿತುಕೊಳ್ಳುವುದು ಸೇರಿದಂತೆ ಎಲ್ಲ ಶಕ್ತಿಯನ್ನು ಕಳೆದುಕೊಂಡಿದ್ದಾರೆ.

Mumbai Mirror 19 Mar 2018, 3:36 pm
ಮುಂಬಯಿ: ಕೊಬ್ಬಿನ ಕಾರಣದಿಂದ ಹೆಚ್ಚಿದ್ದ ದೇಹತೂಕವನ್ನು ಇಳಿಸಿಕೊಳ್ಳಲೆಂದು ಚಿಕಿತ್ಸೆ ಪಡೆದು ಎರಡು ತಿಂಗಳಿನಿಂದ ಲಿಂಬೆ ರಸ ಮತ್ತು ಬೆಲ್ಲದ ಮಿಶ್ರಣವನ್ನೇ ಸೇವಿಸುತ್ತಿದ್ದ ಮಹಿಳೆ ಈಗ ಮಾತು, ನಡೆಯುವುದು, ಸರಿಯಾಗಿ ಕುಳಿತುಕೊಳ್ಳುವುದು ಸೇರಿದಂತೆ ಎಲ್ಲ ಶಕ್ತಿಯನ್ನು ಕಳೆದುಕೊಂಡಿದ್ದಾರೆ.
Vijaya Karnataka Web weight loss therapy leaves woman with brain disorder
​ತೂಕ ಕಳೆಯುವ ಚಿಕಿತ್ಸೆಗೆ ಬಲಿಯಾಯಿತು ಮಹಿಳೆಯ ಬದುಕು


ಈ ಚಿಕಿತ್ಸೆಯ ಮೊರೆ ಹೋದ 33 ವರ್ಷದ ಗೌರಿ ಅತ್ರೆ ಅವರ ನರಮಂಡಲಕ್ಕೆ ಬಹಳಷ್ಟು ಹಾನಿಯಾಗಿದೆ. ಇವರ ಕೈ ಕಾಲು, ತಲೆ, ಕುತ್ತಿಗೆ ನಡುಗುತ್ತಿದ್ದು, ನಿಯಂತ್ರಣವೇ ತಪ್ಪಿ ಹೋಗಿದೆ. ಆಸ್ಪತ್ರೆಯೊಂದರಲ್ಲಿ ನಡುಕಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ತೂಕ ಕಳೆದುಕೊಳ್ಳುವ ಚಿಕಿತ್ಸೆಗಳಲ್ಲಿ ಕೆಲವೊಂದು ಇಂಥ ಪ್ರಕರಣಗಳು ಇರುತ್ತವೆ. ಮನೆಗೆ ಮರಳಿದ ಬಳಿಕ ರೋಗಿ ನಮ್ಮ ಚಿಕತ್ಸಾ ವಿಧಾನವನ್ನು ರಿಐಆಗಿ ಪಾಲಿಸದೆ ಹೋದಾಗ ಇಂಥ ಸಂಕೀರ್ಣ ಸಮಸ್ಯೆಗಳು ಉದ್ಭವಿಸುತ್ತವೆ, ಅದು ನಮ್ಮ ಚಿಕಿತ್ಸಾ ವಿಧಾನದ ಲೋಪವಲ್ಲ ಎಂದು ನಾಂದೇಡ್‌ನ ನೇಚರೊಪಥಿ ಕ್ಲಿನಿಕ್‌ನ ವೈದ್ಯರು ಹೇಳಿದ್ದಾರೆ.

ತೂಕ ಕಳೆದುಕೊಳ್ಳುವ ಚಿಕಿತ್ಸೆ ನೀಡಿರುವ ನಿಸರ್ಗಾಂಜಲಿ ಸಂಸ್ಥಾವು ವೈದ್ಯ ಸುನಿಲ್‌ ಕುಲಕರ್ಣಿಗೆ ಸೇರಿದ್ದಾಗಿದೆ. ಗೌರಿ ಅತ್ರೆ ಇಲ್ಲಿ 2017ರ ಆಗಸ್ಟ್‌ 26ರಿಂದ ಚಿಕಿತ್ಸೆ ಪಡೆದಿದ್ದರು. ಆಗ ದ್ರವ ಆಹಾರ ಸೇವಿಸುತ್ತಿದ್ದರು. ಬಳಿಕ ಕಶ್ಮಲಗಳನ್ನು ಹೊರ ಹಾಕುವ ದ್ರವ ಇಲ್ಲವೇ ಅನಿಲವನ್ನು ದೇಹಕ್ಕೆ ಇಂಜೆಕ್ಟ್‌ ಮಾಡಲಾಗುತ್ತಿತ್ತು. ಅದಾದ ಬಳಿಕ ವೈದ್ಯರ ಸಲಹೆಯಂತೆ 35 ದಿನ ಅಂದರೆ ಅಕ್ಟೋಬರ್‌ ಇಪ್ಪತ್ತರವರೆಗೆ ಕೇವಲ ನೀರು ಮತ್ತು ಲಿಂಬೆ ಮತ್ತು ಹಾಗೂ ಬೆಲ್ಲ ಮಿಶ್ರಣ ಸೇವಿಸಿದ್ದರು.

ನವೆಂಬರ್‌ ಮೊದಲ ವಾರದಲ್ಲಿ ಅತ್ರೆ ಅವರ ಆರೋಗ್ಯ ಹದಗೆಡಲಾರಂಭಿಸಿತ್ತು. ಅವರ ದೃಷ್ಟಿ ಕ್ಷೀಣಿಸತೊಡಗಿತ್ತು. ನಿಶ್ಯಕ್ತಿ ಜತೆಗೆ ಉಸಿರಾಟ ಸಮಸ್ಯೆ, ನೆನಪಿನ ಶಕ್ತಿ ಕುಂದಲಾರಂಭಿಸಿತ್ತು. ಹೀಗಾಗಿ ನಾಂದೇಡ್‌ನ ಜೀಜಾ ಮಾತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೆ ಅಲ್ಲಿ ಚೇತರಿಸಿಕೊಳ್ಳದ ಕಾರಣ ಹೈದರಾಬಾದ್‌ನ ಅಪೋಲೊ ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಅಲ್ಲಿ ಇಪ್ಪತ್ತು ದಿನ ಚಿಕಿತ್ಸೆ ನೀಡಲಾಯಿತು. ನರ ವ್ಯವಸ್ಥೆ ಕುಸಿದಿದ್ದು, ಆಕೆಗೆ ದ್ರವ ಆಹಾರ ಸೇವನೆಯನ್ನು ಕೂಡ ಸ್ವೀಕರಿಸುವ ಸಾಮರ್ಥ್ಯ ಇಲ್ಲವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕೊನೆಗೆ ಕಳೆದ ಫೆಬ್ರವರಿಯಲ್ಲಿ ರೂಬಿಹಾಲ್‌ ಕ್ಲಿನಿಕ್‌ಗೆ ದಾಖಲಾದ ಅತ್ರೆ ಅವರಿಗೆ ಡಾ. ರಾಜಾಸ್‌ ದೇಶಪಾಂಡೆ ಚಿಕಿತ್ಸೆ ನೀಡಿದರು. ಮೆದುಳಿನ ಕೇಂದ್ರ ಭಾಗವೇ ಹಾನಿಗೊಂಡಿರುವುದನ್ನು ಖಚಿತಪಡಿಸಿಕೊಂಡ ಅವರು ನಡುಕ ನಿಯಂತ್ರಣಕ್ಕೆ ಬರುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ ಅತ್ರೆ ಅವರು ಈಗ ಮಾತು, ಚಲನೆ, ಕೂರುವುದು, ನಡೆದಾಡುವುದು ಸೇರಿದಂತೆ ಎಲ್ಲ ಸಾಮರ್ಥ್ಯ ಕಳೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ