ಆ್ಯಪ್ನಗರ

ದೇಶದ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಅಭಿಜಿತ್‌ ಸಲಹೆ ನೀಡಲಿ ಎಂದ ಬಿಜೆಪಿ!

ನೊಬೆಲ್‌ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್‌ ಬ್ಯಾನರ್ಜಿ ವಿರುದ್ಧ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿ­ಸಿರುವ ಬೆನ್ನಲ್ಲಿಯೇ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದೇಶದ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಅಭಿಜಿತ್‌ ಸೂಕ್ತ ಸಲಹೆ ನೀಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vijaya Karnataka Web 21 Oct 2019, 8:10 am
ಕೋಲ್ಕೊತಾ: ನೊಬೆಲ್‌ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್‌ ಬ್ಯಾನರ್ಜಿ ವಿರುದ್ಧ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲಿಯೇ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು, ದೇಶದ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಅಭಿಜಿತ್‌ ಸೂಕ್ತ ಸಲಹೆ ನೀಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web Dilip Ghosh


ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರನ್ನು ಎಡಪಂಥೀಯರೆಂದ ಗೋಯಲ್‌!

''ಅಭಿಜಿತ್‌ ಅವರು ಬಹುದೊಡ್ಡ ವ್ಯಕ್ತಿ. ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಬಗ್ಗೆ ಹಲವರಿಗೆ ವಿಭಿನ್ನ ನಿಲುವುಗಳು ಇರ­ಬಹುದು. ಆದರೆ ದೇಶದ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಅಭಿಜಿತ್‌ ಅವರು ಖಂಡಿತವಾ­ಗಿಯೂ ಸಲಹೆ ನೀಡಬಲ್ಲರು ಎನ್ನುವ ವಿಶ್ವಾಸವಿದೆ,'' ಎಂದು ದಿಲೀಪ್‌ ಹೇಳಿದ್ದಾರೆ.

ಭಾರತದ ಆರ್ಥಿಕತೆ ಅಲುಗಾಡುತ್ತಿದೆ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಎಚ್ಚರಿಕೆ

ಅಭಿಜಿತ್‌ ವಿರುದ್ಧ ಇತರ ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಅಭಿಜಿತ್‌ ಬ್ಯಾನರ್ಜಿ ಮೂಲತಃ ಪಶ್ಚಿಮ ಬಂಗಾಳದವರು. ಕೇಂದ್ರ ಸಚಿವ ಪಿಯೂಷ್‌ ಗೋಯೆಲ್‌, ಅಭಿಜಿತ್‌ ಅವರು ಎಡ­ಪಂಥೀಯ ವಿಚಾರಧಾರೆ ಕಡೆಗೆ ವಾಲಿರುವ ವ್ಯಕ್ತಿ. ಅವರು ಪ್ರಸ್ತಾಪಿಸಿ­ರುವ ಕನಿಷ್ಠ ಆದಾಯ ಯೋಜನೆ­ಯನ್ನು ಈಗಾಗಲೇ ಭಾರತೀಯ ಮತದಾರ ತಿರಸ್ಕರಿಸಿದ್ದಾನೆ ಎಂದು ಟಾಂಗ್‌ ಕೊಟ್ಟಿದ್ದರು.

‘ಧರ್ಮಾಂದರು ದ್ವೇಷದಿಂದ ಕುರುಡಾಗಿದ್ದಾರೆ': ಕೇಂದ್ರ ಸಚಿವ ಗೋಯಲ್‌ ವಿರುದ್ಧ ರಾಹುಲ್ ವಾರ್

ಭಾರತದ ಆರ್ಥಿಕತೆ ಕ್ಷೇತ್ರದಲ್ಲಿಇದುವರೆಗೂ ಅಭಿಜಿತ್‌ ಅವರ ಆರ್ಥಿಕ ನೀತಿಗಳನ್ನು ಪ್ರಯೋಗಿಸ­ಲಾಗಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ ಕೂಡ ಅಸಮಾಧಾನ ಹೊರಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ