ಆ್ಯಪ್ನಗರ

ದೇಶಭಕ್ತಿಯ ಪ್ರತಿಬಿಂಬ: ಹೊಸ ಆ್ಯಪ್ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ ಅಭಿಮತ!

ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸೆಲ್ಫ್ ಸ್ಕ್ಯಾನ್ ​​ಎಂಬ ಹೆಸರಿನ ನೂತನ ಆ್ಯಪ್‌ನ್ನು ಹೊರತಂದಿದ್ದು, ಇದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ.

Vijaya Karnataka Web 6 Jul 2020, 7:20 pm
ಕೋಲ್ಕತ್ತಾ: ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವ ದಾಖಲೆಗಳನ್ನು ಸಂಗ್ರಹಿಸುವ ನೂತನ ಆ್ಯಪ್‌ನ್ನು ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆ ಮಾಡಿದ್ದಾರೆ.
Vijaya Karnataka Web Mamata Banerjee
ಸಂಗ್ರಹ ಚಿತ್ರ


ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಆ್ಯಪ್ ದೇಶಭಕ್ತಿಯ ಪ್ರತಿಬಿಂಬ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಯಾವಾಗಲೂ ದೇಶೀಯ ನಿರ್ಮಿತ ವಸ್ತುಗಳನ್ನಷ್ಟೇ ಬಳಸಲು ಇಚ್ಛಿಸುತ್ತೇನೆ. ಅದರಂತೆ ಈ ಆ್ಯಪ್ ಕೂಡ ಅಪ್ಪಟ ಭಾರತೀಯವಾದದ್ದರಿಂದ ಇದು ದೇಶಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮಮತಾ ಹೇಳಿದ್ದಾರೆ.

ದುಷ್ಟ ಚೀನಾಕ್ಕೆ ಆ್ಯಪ್‌ ಗುದ್ದು: ಡ್ರ್ಯಾಗನ್‌ ದರ್ಪಕ್ಕೆ ಭಾರತದ ಬಲವಾದ ಪೆಟ್ಟು!

ಸೆಲ್ಫ್ ಸ್ಕ್ಯಾನ್ ಎಂಬ ಹೆಸರಿನ ಈ ಆ್ಯಪ್ ದಾಖಲೆಗಳನ್ನು ಸಂಗ್ರಹಿಸಿಡಲು ನೆರವಾಗಲಿದೆ ಎನ್ನಲಾಗಿದ್ದು, ಇದನ್ನು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವುದು ವಿಶೇಷ.

ಕೇಂದ್ರ ಸರ್ಕಾರ ಚೀನಾದ 59 ಆ್ಯಪ್‌ಗಳ ಬಳಕೆಯ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರ ಸೆಲ್ಫ್ ಸ್ಕ್ಯಾನ್ ಎಂಬ ಆ್ಯಪ್‌ನ್ನು ಬಿಡುಗಡೆ ಮಾಡಿರುವುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ