ಆ್ಯಪ್ನಗರ

ನವಜಾತ ಶಿಶುವಿನ ಜೀವ ಉಳಿಸಿ ಕ್ಷಣಗಳಲ್ಲೇ ಕಣ್ಣುಮುಚ್ಚಿದ ವೈದ್ಯ

ವೈದ್ಯರೊಬ್ಬರು ನವಜಾತ ಶಿಶುವನ್ನು ಉಳಿಸಿದ ಕ್ಷಣಗಳಲ್ಲೇ ಕಣ್ಣು ಮುಚ್ಚಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದೆ. ಹೆರಿಗೆ ಮಾಡಿಸಿ ನಿಶ್ಚೇಷ್ಟವಾಗಿದ್ದ ಮಗುವನ್ನು ವಾರ್ಮರ್‌ನಲ್ಲಿ ಇಟ್ಟು ಜೀವ ಬರುವಂತೆ ಮಾಡಿದ್ದಾರೆ. ಆದರೆ ಕೂಡಲೆ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

TIMESOFINDIA.COM 17 Jan 2019, 3:45 pm
ಕೋಲ್ಕತ: ನವಜಾತ ಶಿಶುವಿನ ಜೀವ ಉಳಿಸಿದ 48 ವರ್ಷದ ವೈದ್ಯರೊಬ್ಬರು ಲೇಬರ್ ರೂಮಿನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೊಲ್ಕತದ ಪಶ್ಚಿಮ ಮಿಡ್ನಾಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಮಂಗಳವಾರ ನಡೆದಿದೆ. ಡಾ.ಬಿಭಾಶ್ ಖುತಿಯಾ ಮೃತಪಟ್ಟ ವೈದ್ಯರು.
Vijaya Karnataka Web doctor


ಕರ್ತವ್ಯದಲ್ಲಿದ್ದ ಖುತಿಯಾ ಅವರು, ಸೋನಾಲಿ ಖುಲಿಯಾ ಮಜಿ ಎಂಬುವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಹಜ ಹೆರಿಗೆಯಾದರೂ ನವಜಾತ ಶಿಶು ಚಲನೆ ಇಲ್ಲದೆ ನಿಶ್ಚೇಷ್ಟವಾಗಿದ್ದ ಕಾರಣ ವೈದ್ಯರು ಕೂಡಲೆ ಮಗುವನ್ನು ವಾರ್ಮರ್‌ನಲ್ಲಿ ಇಟ್ಟರು. ಆಗ ಮಗು ಕಣ್ಣು ಬಿಟ್ಟಿದೆ. ಮಗು ಬದುಕಿದ ಕ್ಷಣಗಳಲ್ಲೇ ಖುತಿಯಾ ಕುಸಿದು ಬಿದ್ದಿದ್ದಾರೆ.

ಕೂಡಲೆ ಅವರನ್ನು ಉಳಿದ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಮೇಲೆತ್ತಿ ಹತ್ತಿರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ವೈದ್ಯರಿಗೆ ಹಠಾತ್ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಕಳೆದ ಹತ್ತೂವರೆ ವರ್ಷಗಳಿಂದ ಖುತಿಯಾ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿತ್ತು, ಸದಾ ಕರ್ತವ್ಯ ಪಾಲನೆಯಲ್ಲಿರುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಸ್ವತಃ ಇವರೇ ಲೇಬರ್ ರೂಮನ್ನು ನಿರ್ಮಿಸಿ ಹೆರಿಗೆ ಬರುವವರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದುರಾದಾಗಲೆಲ್ಲಾ ರೋಗಿಗಳಿಗೆ 24 ಗಂಟೆ ಲಭ್ಯವಿರುತ್ತಿದ್ದರು.

ಕೆಲ ತಿಂಗಳ ಹಿಂದೆಯೇ ಕರೋನರಿ ಆಂಜಿಯೋಗ್ರಫಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ತಮ್ಮ ಅನಾರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದರು. ಇಂತಹ ಪರಿಸ್ಥಿತಿಯಲ್ಲೂ ತುಂಬಾ ಕೆಲಸ ಒತ್ತಡ ಅನುಭವಿಸುತ್ತಿದ್ದರು ಎಂದಿದ್ದಾರೆ ವೈದ್ಯರೊಬ್ಬರು.

ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣ ಸೋಮವಾರ ಈ ಆಸ್ಪತ್ರೆಗೆ ದಾಖಲಾಗಿದ್ದಾರೆ ಪಶ್ಚಿಮ ಮಿಡ್ನಾಪುರದ ಸೋನಾಲಿ. ಮಂಗಳವಾರ ಬೆಳಗ್ಗೆ 10.25ಕ್ಕೆ ಲೇಬರ್ ಕೊಠಡಿಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಖುತಿಯಾ ಅವರೇ ಹೆರಿಗೆ ಮಾಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ