ಆ್ಯಪ್ನಗರ

ಪಶ್ಚಿಮ ಬಂಗಾಳ ಇನ್ನು ‘ಬಾಂಗ್ಲಾ’ ವಿಧಾನಸಭೆಯಲ್ಲಿ ನಿರ್ಣಯ

ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ವಿಧಾನಸಭೆ ಗುರುವಾರ ಅಂಗೀಕರಿಸಿದೆ ಗೊತ್ತುವಳಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗುತ್ತದೆ.

Vijaya Karnataka 27 Jul 2018, 10:22 am
ಕೋಲ್ಕತಾ: ಪಶ್ಚಿಮ ಬಂಗಾಳವನ್ನು 'ಬಾಂಗ್ಲಾ' ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ರಾಜ್ಯ ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಗೊತ್ತುವಳಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗುತ್ತದೆ.
Vijaya Karnataka Web mamata banerjee


ಕೇಂದ್ರ ಒಪ್ಪಿಗೆ ನೀಡಿದ ಬಳಿಕ ಹೊಸ ಹೆಸರು ಜಾರಿಗೆ ಬರುತ್ತದೆ. ವರ್ಣಮಾಲೆಯ ಪ್ರಕಾರ ಅನುಕ್ರಮವಾಗಿ ರಾಜ್ಯದ ಹೆಸರುಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳವು ಕೊನೆಯ ಸ್ಥಾನದಲ್ಲಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬೆಂಗಾಲಿ, ಇಂಗ್ಲೀಷ್‌ ಮತ್ತು ಹಿಂದಿ ಭಾಷೆಗಳಲ್ಲಿ ರಾಜ್ಯವನ್ನು ಬಂಗ್ಲಾ ಎಂದು ಕರೆಯಲಾಗುವುದು ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ. ಬೆಂಗಾಲಿಯಲ್ಲಿ ಬಾಂಗ್ಲಾ, ಇಂಗ್ಲಿಷ್‌ನಲ್ಲಿ ಬೆಂಗಾಲ್‌ ಮತ್ತು ಹಿಂದಿಯಲ್ಲಿ ಬೆಂಗಾಲ್‌ ಎಂದು ಮೂರು ಹೆಸರುಗಳ ರಾಜ್ಯ ಸರಕಾರದ ಪ್ರಸ್ತಾಪವನ್ನು ಈ ಹಿಂದೆ ಕೇಂದ್ರ ಸರಕಾರ ತಿರಸ್ಕರಿಸಿತ್ತು. 2011ರಲ್ಲಿ ಪಶ್ಚಿನ ಬಂಗಾಳವನ್ನು 'ಪಶ್ಚಿಮ ಬಂಗೊ' ಎಂದು ಮರುನಾಮಕರಣ ಮಾಡುವ ಮಮತಾ ಸರಕಾರದ ಪ್ರಸ್ತಾಪವನ್ನು ಸಹ ಕೇಂದ್ರ ಸರಕಾರ ತಿರಸ್ಕರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ