ಆ್ಯಪ್ನಗರ

ವಾಗ್ಮಿ ವಾಜಪೇಯಿ ಮಾತು ಮರೆಸಿದ ಆ ಕ್ಷಣ...

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಭಾಷಣಗಳು, ಅವರ ಮಾತಿನ ಚತುರಗಾರಿಕೆಯನ್ನು ಕೇಳಿ ಇಂದಿಗೂ ಸಹ ಲಕ್ಷಾಂತರ ಜನರಲ್ಲಿ ಉತ್ಸಾಹ ಮೂಡುತ್ತದೆ. ಆದರೆ, ಅವರ ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಗ ಬಾಲಕ ಅಟಲ್‌ ಅವರು ಮಾತನಾಡುವಾಗ ತಡವರಿಸಿದ್ದರು ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ.

TIMESOFINDIA.COM 17 Aug 2018, 1:02 pm
ಇಂದೋರ್ / ಉಜ್ಜಯಿನಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಭಾಷಣಗಳು, ಅವರ ಮಾತಿನ ಚತುರಗಾರಿಕೆಯನ್ನು ಕೇಳಿ ಇಂದಿಗೂ ಸಹ ಲಕ್ಷಾಂತರ ಜನರಲ್ಲಿ ಉತ್ಸಾಹ ಮೂಡುತ್ತದೆ. ಆದರೆ, ಅವರ ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿಗೆ ಚರ್ಚಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾಗ ಬಾಲಕ ಅಟಲ್‌ ಅವರು ಮಾತನಾಡುವಾಗ ತಡವರಿಸಿದ್ದರು ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. 1934ರಲ್ಲಿ ಉಜ್ಜಯಿನಿ ಜಿಲ್ಲೆಯ ಬಾರ್ನಗರ್ ಪಟ್ಟಣದ ಶಾಲೆಯಲ್ಲಿ ತಮ್ಮ ಸಹಪಾಠಿಗಳ ಎದುರು ವಾಜಪೇಯಿ ಮೌನವಾಗಿದ್ದ ಆ ಕ್ಷಣ ನಂತರ ಅವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ.
Vijaya Karnataka Web vajpayee..


'ನನ್ನ ಜೀವನದ ಮೊದಲನೇ ಭಾಷಣವನ್ನು ಮುಗಿಸಲು ಸಾಧ್ಯವಾಗಿರಲಿಲ್ಲ. ನನ್ನನ್ನು ನೋಡಿ ಅನೇಕರು ಅಪಹಾಸ್ಯ ಮಾಡಿದ್ದರು. ಆದರೆ, ಇದರಿಂದ ನಾನು ಪಾಠ ಕಲಿತೆ. ಆ ಘಟನೆ ನನ್ನ ಜೀವನವನ್ನೇ ಬದಲಾಯಿಸಿದೆ. ಅಂದಿನಿಂದ ಭಾಷಣವನ್ನು ನಾನೆಂದಿಗೂ ಕಂಠಪಾಠ ಮಾಡಬಾರದೆಂದು ಪ್ರತಿಜ್ಞೆ ಮಾಡಿದ್ದೆ' ಎಂದು 1996 ರ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಕುರಿತು ಹೇಳಿಕೊಂಡಿದ್ದರು.

ಜತೆಗೆ, '1934ರಲ್ಲಿ ನನ್ನ ತಂದೆ ಹೆಡ್‌ ಮಾಸ್ಟರ್‌ ಆಗಿ ಆಂಗ್ಲೋ ವರ್ನಾಕ್ಯುಲರ್ ಮಿಡಲ್‌ ಸ್ಕೂಲ್‌ಗೆ ಸೇರಿಕೊಂಡಿದ್ರು. ಹೀಗಾಗಿ, ನಾನು ಸಹ ಆ ಶಾಲೆಗೆ ಸೇರಿದ್ದೆ. ಅಲ್ಲದೆ, ಆ ವೇಳೆಯಲ್ಲಿ ಮೊದಲ ಬಾರಿಗೆ ಚರ್ಚಾ ಸ್ಫರ್ಧೆಯಲ್ಲಿ ಭಾಗಿಯಾಗಿದ್ದು, 'ಭಾರತೀಯ ರೈಲ್ವೆ ಅಭಿವೃದ್ಧಿಗೆ ಬ್ರಿಟಿಷರ ಕೊಡುಗೆ' ಎಂಬ ವಿಚಾರದ ಬಗ್ಗೆ ಮಾತನಾಡಬೇಕಾಗಿತ್ತು. ನನ್ನ ಜೀವನದ ಅಂದಿನ ಘಟನೆಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ' ಎಂದೂ ಅಟಲ್ ಬಿಹಾರಿ ವಾಜಪೇಯಿ ನೆನಪಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ