ಆ್ಯಪ್ನಗರ

ಕೆಟ್ಟ ದಾರಿಯೇ ಸನ್ಮಾರ್ಗ ತೋರಿದರೆ?

ಇಲ್ಲಿನ ರಸ್ತೆಗಳಲ್ಲಿ ಯುವಕರು ಟ್ರಾಫಿಕ್ ಜಾಕೆಟ್ ಹಾಕ್ಕೊಂಡು, ವಾಹನ ಸಂಚಾರಿಗಳಿಗೆ ಗೈಡ್ ಮಾಡುತ್ತಾರೆ. ಹಾಗಂತ ಸುಮ್ ಸುಮ್ಮನೆ ಇವರೆಲ್ಲ ಈ ಕೆಲಸಕ್ಕೆ ಕೈ ಹಾಕಿಲ್ಲ. ಬದಲಾಗಿ ಸಂಚಾರಿ ಪೊಲೀಸರೇ ಈ ಯುವಕರನ್ನು ಇಂಥದ್ದೊಂದು ಕೆಲಸಕ್ಕೆ ಅಧಿಕೃತವಾಗಿ ನೇಮಿಸಿದ್ದಾರೆ.

TOI Contributor 10 May 2016, 3:33 pm
ವಾಸ್ಕೋ: ಇಲ್ಲಿನ ರಸ್ತೆಗಳಲ್ಲಿ ಯುವಕರು ಟ್ರಾಫಿಕ್ ಜಾಕೆಟ್ ಹಾಕ್ಕೊಂಡು, ವಾಹನ ಸಂಚಾರಿಗಳಿಗೆ ಗೈಡ್ ಮಾಡುತ್ತಾರೆ. ಹಾಗಂತ ಸುಮ್ ಸುಮ್ಮನೆ ಇವರೆಲ್ಲ ಈ ಕೆಲಸಕ್ಕೆ ಕೈ ಹಾಕಿಲ್ಲ. ಬದಲಾಗಿ ಸಂಚಾರಿ ಪೊಲೀಸರೇ ಈ ಯುವಕರನ್ನು ಇಂಥದ್ದೊಂದು ಕೆಲಸಕ್ಕೆ ಅಧಿಕೃತವಾಗಿ ನೇಮಿಸಿದ್ದಾರೆ.
Vijaya Karnataka Web when the wrong path leads to the right road
ಕೆಟ್ಟ ದಾರಿಯೇ ಸನ್ಮಾರ್ಗ ತೋರಿದರೆ?


ಒಂದೆಡೆ ಸಂಚಾರಿ ಪೊಲೀಸರ ಕೊರತೆ. ಮತ್ತೊಂದೆಡೆ ಸಣ್ಣ ಪುಟ್ಟ ತಪ್ಪು ಮಾಡಿ ಬಾಲ ನ್ಯಾಯ ಮಂಡಳಿಯಲ್ಲಿರುವ ಮಕ್ಕಳಿಗೆ ಹೆಚ್ಚು ಶ್ರಮ ನೀಡದೆ ಬಳಸಿಕೊಳ್ಳುವ ಅನಿವಾರ್ಯತೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸುವ ಉದ್ದೇಶದಿಂದ ಈ ಮಕ್ಕಳನ್ನು ಸಂಚಾರಿ ಪೊಲೀಸರೊಂದಿಗೆ ಟ್ರಾಫಿಕ್ ಕಂಟ್ರೋಲ್ ಮಾಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ಮೋಟಾರ್ ವೆಹಿಕಲ್ ಅಪಘಾತದಲ್ಲಿ ಭಾಗಿಯಾಗಿ, ಇಬ್ಬರಿಗೆ ಗಾಯವಾಗುವಂತೆ ಮಾಡಿದ 18 ವರ್ಷದ ಶಾಹೀದ್ ಅಲಮ್ ಸಂಜೆ 6ಕ್ಕೆ ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ನಿಯೋಜಿಸಿದ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗುತ್ತಾನೆ. ಬ್ಯುಸಿ ಟ್ರಾಫಿಕ್‌ ಕಂಟ್ರೋಲ್ ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಲ್ಲದೇ, ಟ್ರಾಫಿಕ್ ಪೊಲೀಸರ ಒತ್ತಡವನ್ನೂ ಕಡಿಮೆ ಮಾಡುತ್ತಾನೆ. ಬಂಧನದಿಂದ ಬಿಡುಗಡೆಯಾಗುವ ಹೊತ್ತಿಗೆ ಕೌಶಲ್ಯವೊಂದರಲ್ಲಿ ಈತ ಪಳಗಿದಂತೆಯೂ ಆಗುತ್ತದೆ.

14 ವರ್ಷದ ರಾಜು ಕಥೆಯೂ ಭಿನ್ನವಾಗಿಲ್ಲ. ಸ್ನೇಹಿತರು ಕರೆದರೆಂದು ಸಾಹಸದ ಕೆಲಸವೆಂದುಕೊಂಡು ಕಳ್ಳತನವೊಂದಕ್ಕೆ ಸಹಕರಿಸಿದ್ದಾನೆ. ಅದಕ್ಕವನಿಗೆ ಸಿಕ್ಕಿದ್ದು ಕೇವಲ 300 ರೂ. ಮಾಡಿದ ತಪ್ಪಿಗೆ ಇದೀಗ ಶಿಕ್ಷೆ ಆಗುತ್ತಿದೆ. ಈಗ ಮಾಡುತ್ತಿರುವ ಕೆಲಸ ಈತನಿಗೆ ಸಂತಸ ತಂದಿದೆ. ರೇಸರ್ ಆಗಲು ಬಯಸುವ ಈತನಿಗೆ ಕಲಿಯುತ್ತಿರುವ ಸಂಚಾರಿ ನಿಯಮಗಳಿಂದ 18 ವರ್ಷವಾದ ಬಳಿಕ ನೆರವಾಗುವ ವಿಶ್ವಾಸವೂ ಇದೆ.

ಕಳ್ಳತನದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದ ಇನ್ನು ಮೂವರಿಗೂ ಟ್ರಾಫಿಕ್ ಪೊಲೀಸರು ತರಬೇತು ನೀಡುತ್ತಿದ್ದಾರೆ.

ಈ ಮಕ್ಕಳು ಏಪ್ರಿಲ್ 25ರಿಂದ ಮೇ 25ರವರೆಗೆ ಸಂಚಾರಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಗಂಟೆ ಕಾಲ ಅವರಿಗೆ ಸಂಚಾರಿ ನಿಯಮಗಳನ್ನು ಕಲಿಸಲು ಸೂಚಿಸಲಾಗಿದೆ. ಮುಖ್ಯ ರಸ್ತೆಗಳಿಗೆ ಕರೆದುಕೊಂಡು ಹೋಗಿ, ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದು ಅವರನ್ನು ಕೆಟ್ಟ ಕೆಲಸಕ್ಕೆ ಪ್ರೇರೇಪಿಸುವ ಬದಲು, ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನೆರವಾಗಬಹುದೆಂಬ ವಿಶ್ವಾಸವಿದೆ.

- ನಾರ್ವೇಕರ್, ಪೊಲೀಸ್ ಇನ್ಸ್‌ಪೆಕ್ಟರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ