ಆ್ಯಪ್ನಗರ

ಒಂದೇ ಛಾವಡಿಯಡಿಯಲ್ಲಿ ಹಿಂದೂ-ಮುಸ್ಲಿಂ ಪ್ರಾರ್ಥನೆ ಸಲ್ಲಿಕೆ!

ಸೌಹಾರ್ದಯುತ ಸಮಾಜವನ್ನು ಕಟ್ಟುವುದಕ್ಕೆ ನಿದರ್ಶನವಾಗಿರುವ ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿರುವ ದರ್ಬಾರ್ ಹಾಗೂ ಹನುಮಾನ್ ಮಂದಿರಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಗೊಂದು ಪ್ರತೀಕವಾಗಿದೆ.

ಟೈಮ್ಸ್ ಆಫ್ ಇಂಡಿಯಾ 27 Apr 2017, 10:24 am
ಅಲ್ವಾರ್: ಸೌಹಾರ್ದಯುತ ಸಮಾಜವನ್ನು ಕಟ್ಟುವುದಕ್ಕೆ ನಿದರ್ಶನವಾಗಿರುವ ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿರುವ ದರ್ಬಾರ್ ಹಾಗೂ ಹನುಮಾನ್ ಮಂದಿರಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಗೊಂದು ಪ್ರತೀಕವಾಗಿದೆ.
Vijaya Karnataka Web where hindus and muslims offer prayers under same roof
ಒಂದೇ ಛಾವಡಿಯಡಿಯಲ್ಲಿ ಹಿಂದೂ-ಮುಸ್ಲಿಂ ಪ್ರಾರ್ಥನೆ ಸಲ್ಲಿಕೆ!


ಹಿಂದೂ-ಮುಸ್ಲಿಂ ಬಾಂಧವರಲ್ಲಿ ಕೋಮು ಸೌಹಾರ್ದತೆಯ ಕೊರತೆ ಇದೆ ಎಂದು ಆರೋಪಿಸುವವರು ಇಲ್ಲಿಗೊಮ್ಮೆ ಭೇಟಿ ನೀಡಿದರೆ ಒಳ್ಳೆಯದು. ಮೋತಿ ಡೂಂಗ್ರಿ ಬೆಟ್ಟದ ತುದಿಯಲ್ಲಿರುವ ಸಯ್ಯದ್ ದರ್ಬಾರ್ ಹಾಗೂ ಸಂಕಟ ಮೋಚನ ವೀರ ಹನುಮಾನ್ ಮಂದಿರಗಳು ನಿಜಕ್ಕೂ ಸಮಾನತೆಯ ಪ್ರತೀಕವಾಗಿದೆ.

ಎರಡು ಧರ್ಮದವರನ್ನು ಬೇರ್ಪಡಿಸಲು ಇಲ್ಲಿ ಯಾವುದೇ ಗೋಡೆಗಳನ್ನು ಕಟ್ಟಲಾಗಿಲ್ಲ. ಅಷ್ಟೇ ಯಾಕೆ ಗುರುವಾರ ಭಜನೆಯ ಬಳಿಕ ಮಸೀದಿಯಲ್ಲಿ ಅಲ್ಲಾಹುವನ್ನು ಕೊಂಡಾಡಲು ಇದೇ ಮೈಕ್ರೋಫೋನ್, ಲೌಡ್ ಸ್ಪೀಕರ್ ಹಾಗೂ ಹಾರ್ಮೋನಿಯಂಗಳನ್ನು ಬಳಕೆ ಮಾಡುತ್ತಾರೆ.

ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳು ಭಕ್ತಿ ಭಾವದಿಂದ ಹಿಂದೂ ಹಾಗೂ ಮುಸ್ಲಿಂ ದೇವರನ್ನು ಪೂಜಿಸುತ್ತಾರೆ. ಇಂತಹ ಪವಿತ್ರ ಸ್ಥಳಗಳು ಈಗಲೂ ಅಸ್ತಿತ್ವದಲ್ಲಿದೆ ಎಂಬುದು ಇಲ್ಲಿನ ಸಾಮರಸ್ಯಕ್ಕೆ ಕಾರಣವಾಗಿದೆ ಎಂದು ಭಕ್ತರು ಅಭಿಪ್ರಾಯಪಡುತ್ತಾರೆ.

ಇಲ್ಲಿನ ಕಂಪೌಂಡ್‌ನಲ್ಲಿರುವ ಮುಸ್ಲಿಂ ಹಾಗೂ ಕೇಸರಿ ಧ್ವಜಗಳು ಜೊತೆಯಾಗಿ ಹಾರಾಡುತ್ತಿದ್ದು, ಬೆಟ್ಟದ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ