ಆ್ಯಪ್ನಗರ

ಇಮ್ರಾನ್ ಚಿಂತೆಗೀಡಾಗಿರುವುದು ಕಾಶ್ಮೀರದಲ್ಲಿ 370ನೇ ವಿಧಿ ರದ್ದಿಗಾಗಲ್ಲ, ಮತ್ಯಾಕೆ ಗೊತ್ತಾ?

ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿರುವ ಎಚ್ ವಿ ಶೃಂಗಲಾ ಕಾಶ್ಮೀರದ ಬಗ್ಗೆ ಇಮ್ರಾನ್ ಖಾನ್ ಅವರು ಯಾಕೆ ತಲೆಕೆಡಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

Times Now 20 Sep 2019, 12:40 pm
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 37ನೇ ವಿಧಿ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಮತ್ತಷ್ಟು ಸಿಡಿಮಡಿಗೊಂಡಿರುವುದು ಜಗತ್ತಿಗೆ ಗೊತ್ತಿರುವ ವಿಚಾರ. ಇದೇ ವಿಷಯಕ್ಕೆ ಭಾರತದ ವಿರುದ್ಧ ಜಗತ್ತನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದ ಪಾಕಿಸ್ತಾನ ಈ ದಿಶೆಯಲ್ಲಿ ಸಂಪೂರ್ಣ ಸೋತರು ತನ್ನ ಮೊಂಡುತನ ಬಿಡುತ್ತಿಲ್ಲ. ತಾವು ಈ ವಿಚಾರವನ್ನು ಎತ್ತುತ್ತಲೇ ಇರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.
Vijaya Karnataka Web -h_v_srigla


ಆದರೆ ಜಮ್ಮು ಮತ್ತು ಕಾಶ್ಮೀರ ನಮ್ಮ ಆಂತರಿಕ ವಿಚಾರ. ಪಾಕ್ ಮತ್ತು ನಮ್ಮ ನಡುವೆ ಮತ್ತೇನಾದರೂ ಮಾತುಕತೆ ಇದ್ದರೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಅಷ್ಟೇ ಎಂದು ಭಾರತ ಸ್ಪ,ಷ್ಟಪಡಿಸಿದೆ.

ಈ ಎಲ್ಲದರ ಮಧ್ಯೆ ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿರುವ ಹರ್ಷವರ್ಧನ್ ಶೃಂಗಲಾ ಸ್ಫೋಟಕ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಪಾಕ್ ಪ್ರಧಾನಿಯನ್ನು ಕಾಡುತ್ತಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವ ಸಂಗತಿ ಅಲ್ಲ. ಬದಲಾಗಿ ಅಲ್ಲಿನ ಸ್ಥಿತಿಗತಿ ಸಾಮಾನ್ಯ ಸ್ಥಿತಿಗೆ ಬರುತ್ತಿರುವುದು ಅವರನ್ನು ಚಿಂತೆಗೆ ತಳ್ಳಿದೆ.


ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ 370ನೇ ವಿಧಿ ಬಹುದೊಡ್ಡ ಅಡ್ಡಿಯಾಗಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯಧಾರೆಗೆ ತರುವಲ್ಲಿ ತಡೆಯಾಗಿದ್ದ ಈ ವಿಧಿಯನ್ನು ಕಿತ್ತು ಹಾಕುವ ಮೂಲಕ ಕಣಿವೆನಾಡನ್ನು ಭಾರತ ಸರಕಾರ ವಿಕಾಸದತ್ತ ನಡೆಸಲು ಮೊದಲ ಹೆಜ್ಜೆ ಇಟ್ಟಿದೆ.

ಶೃಂಗಲಾ ಹೇಳುವ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವುದು ಪಾಕಿಸ್ತಾನಕ್ಕೆ ಇಷ್ಟವಿಲ್ಲ. ಅಲ್ಲಿ ವಿಕಾಸ ಪರ್ವ ಆರಂಭವಾದರೆ ಅಲ್ಲಿನ ಜನ ಭಾರತದ ಪರ ವಾಲಬಹುದು. ಪ್ರತ್ಯೇಕವಾದಿಗಳಲ್ಲಿ ಕಿಚ್ಚು ಹೆಚ್ಚಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದಿರಬಹುದು. ಆರ್ಥಿಕ ದುಃಸ್ಥಿತಿಯ ನೆಪವಾಗಿಟ್ಟುಕೊಂಡು ಪ್ರತ್ಯೇಕವಾದಿಗಳು ಅಲ್ಲಿನ ಜನರನ್ನು ರೊಚ್ಚಿಗೆಬ್ಬಿಸುತ್ತಿದ್ದರು. ಮತ್ತೀಗ ಅದೆಲ್ಲದಕ್ಕೂ ಕಡಿವಾಣ ಬೀಳಬಹುದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗದಿರಬಹುದು ಎಂಬುದೇ ಪಾಕ್‌ನ ನೈಜ ಆತಂಕ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ