ಆ್ಯಪ್ನಗರ

ಕಪ್ಪು ಕನ್ನಡಕದ ಜತೆಗೇ ಮಣ್ಣಾದ ಕರುಣಾನಿಧಿ

ಹಳದಿ ಶಾಲು, ಕಪ್ಪು ಕನ್ನಡಕ ಹಾಕಿಯೇ ತಮ್ಮ ಜೀವನದ ಅರ್ಧಕ್ಕೂ ಹೆಚ್ಚು ಸಮಯವನ್ನು ಕರುಣಾನಿಧಿ ಕಳೆದಿದ್ದಾರೆ.

TIMESOFINDIA.COM 8 Aug 2018, 8:56 pm
ಚೆನ್ನೈ: ಹಳದಿ ಶಾಲು, ಕಪ್ಪು ಕನ್ನಡಕ ಹಾಕಿಯೇ ತಮ್ಮ ಜೀವನದ ಅರ್ಧಕ್ಕೂ ಹೆಚ್ಚು ಸಮಯವನ್ನು ಕರುಣಾನಿಧಿ ಕಳೆದಿದ್ದಾರೆ.
Vijaya Karnataka Web karunanidhi


ಇದರ ಪ್ರತೀಕವಾಗಿ ಕಪ್ಪು ಕನ್ನಡಕದ ನೇತಾರನ್ನು, ಅವರ ಕನ್ನಡಕ ಮತ್ತು ಪ್ರೀತಿಯ ಹಳದಿ ಶಾಲು ಹೊದಿಸಿ ಅಂತ್ಯಕ್ರಿಯೆ ನಡೆಸಲಾಯಿತು.

1968ರಲ್ಲಿ ನಡೆದ ಸಣ್ಣ ರಸ್ತೆ ಅಫಘಾತದಿಂದಾಗಿ ಕರುಣಾನಿಧಿಗೆ ಕಪ್ಪು ಕನ್ನಡಕಧಾರಿಯಾಗಿದ್ದರು.

ಕಣ್ಣಿನ ಭಾಗಕ್ಕೆ ಗಾಯವಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಕಣ್ಣಿನ ಹತ್ತಿರ ಆಗಿರುವ ಗಾಯ, ಅವರ ಮುಖಕ್ಕೆ ಕಪ್ಪು ಚುಕ್ಕೆಯಾಗಿತ್ತು. ಅಲ್ಲದೆ ಕಣ್ಣಿನ ಹತ್ತಿರ ಉಂಟಾದ ಗಾಯ ವಾಸಿಯಾಗುವ ವರೆಗೆ ಕಪ್ಪು ಕನ್ನಡ ಧರಿಸುವಂತೆ ವೈದ್ಯರೂ ಸಲಹೆ ನೀಡಿದ್ದರು.

ಅಪಘಾತದ ಬಳಿಕ ಕಣ್ಣಿನ ಮಹತ್ವ ಅರಿತುಕೊಂಡ ಕರುಣಾನಿಧಿ, ಪ್ರತಿವರ್ಷ ಕಣ್ಣು ತಪಾಸಣೆ ಮತ್ತು ಅಗತ್ಯವಿರುವ ರೋಗಿಗಳಿಗೆ ಕಣ್ಣು ಶಸ್ತ್ರಚಿಕಿತ್ಸೆ ನಡೆಸಲು ನೆರವು ನೀಡುತ್ತಿದ್ದರು.

ನಿಧನರಾಗುವ ಕೆಲ ತಿಂಗಳ ಮುನ್ನ ತಮ್ಮ ಕಪ್ಪು ಕನ್ನಡಕವನ್ನು ಬದಲಾವಣೆ ಮಾಡಿದ್ದರು ಎಂದೂ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಕಪ್ಪು ಕನ್ನಡಕ ಹಾಗೂ ಹಳದಿ ಶಲ್ಯ ಜತೆಗೇ ಅವರು ಮಣ್ಣಾಗಿದ್ದಾರೆ.

ಟ್ರೋಲಿಗರ ಕಣ್ಣು

ಕರುಣಾನಿಧಿ ಕನ್ನಡಕವನ್ನು ವಾಟ್ಸ್‌ಆ್ಯಪ್‌, ಸಮಾಜಿಕ ತಾಣಗಳಲ್ಲಿನ ಎಮೋಜಿಗೂ ಹೋಲಿಸಲಾಗುತ್ತಿತ್ತು. ಕಪ್ಪು ಕನ್ನಡಕ ಹಾಕಿದ ಏಮೋಜಿ ಸಿಂಬಲ್‌ನ್ನು ಕರುಣಾನಿಧಿಗೆ ಹೋಲಿಸಿ ಟ್ರೋಲ್‌ ಮಾಡಲಾಗುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ