ಆ್ಯಪ್ನಗರ

ತಿಹಾರ್‌ ಜೈಲ್‌ಗೆ ಸೋನಿಯಾ, ಸಿಂಗ್ ಹೋಗಿದ್ದೇಕೆ?: ‘ಚಿದು ಸಾಂತ್ವನ’ಕ್ಕೆ ಪರ-ವಿರೋಧ ಸಮರ

ತಿಹಾರ್‌ ಜೈಲು ಪಾಲಾಗಿರುವ ಚಿದಂಬರಂ ಅವರನ್ನು ನೋಡಲು ಸೋನಿಯಾ ಹಾಗೂ ಮನಮೋಹನ್ ಸಿಂಗ್ ಹೋಗಿದ್ದು ಸರಿಯೇ? ತಪ್ಪೇ? ಈ ಚರ್ಚೆ ಇದೀಗ ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಸೋನಿಯಾ ಗಾಂಧಿ ನಡೆ ಸರಿ ಅನ್ನೋರ ಸಂಖ್ಯೆ ತುಂಬಾನೇ ವಿರಳ. ಆದ್ರೆ, ತಪ್ಪು ಎಂದು ಹೇಳೋರು ಸಾಕಷ್ಟು ಡಿಫ್ರೆಂಟ್ ಆಗಿ ಕಾಂಗ್ರೆಸ್ ಕಾಲೆಳೆದಿದ್ದಾರೆ.

Vijaya Karnataka Web 23 Sep 2019, 5:17 pm
ಹೊಸದಿಲ್ಲಿ: INX ಮೀಡಿಯಾ ಹಗರಣದಲ್ಲಿ ಸಿಲುಕಿಕೊಂಡು ತಿಹಾರ್ ಜೈಲು ಪಾಲಾಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ನೋಡಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೈಲಿನೊಳಗೆ ಹೋಗಿ ಬಂದ ವಿಚಾರ, ಇದೀಗ ನೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭ್ರಷ್ಟಾಚಾರ ಆರೋಪಿಯನ್ನು ನೋಡಲು ಕಾಂಗ್ರೆಸ್ ಅಧಿನಾಯಕಿ ಜೈಲಿಗೇ ಹೋಗಿದ್ದೇಕೆ ಎಂಬ ವಾದ ಒಂದೆಡೆಯಾದ್ರೆ, ಯಾಕೆ ಹೋಗಬಾರದು ಅನ್ನೋ ವಾದ ಇನ್ನೊಂದ್ಕಡೆ. ಈ ಪೈಕಿ ಇಂಟರೆಸ್ಟಿಂಗ್ ಆದ ಕೆಲವೊಂದು ಟ್ವೀಟ್‌ಗಳು ನಿಮ್ಮ ಮುಂದೆ.
Vijaya Karnataka Web chidu sonia manmohan


ಪ್ರೌಡ್ ಇಂಡಿಯನ್ ಎಂಬ ಟ್ವಿಟರ್ ಖಾತೆ, ತಿಹಾರ್ ಜೈಲ್‌ಗೆ ಹೋಗಿ ಬಂದ ಸೋನಿಯಾ ಅವರನ್ನು ಲೇವಡಿ ಮಾಡಿದೆ. ಭವಿಷ್ಯದಲ್ಲಿ ರಾಹುಲ್, ವಾದ್ರಾ ಹೋದಾಗ ಅಲ್ಲಿನ ವ್ಯವಸ್ಥೆ ಹೇಗಿರುತ್ತೆ ಎಂದು ನೋಡಲು ಹೋಗಿದ್ದಿರಾ ಎಂದು ಕೆಣಕಲಾಗಿದೆ.


ಗುಡ್ಡು ಮಂಡನ್ ಎಂಬಾತ ಕಾರ್ಟೂನ್ ಒಂದನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದಾನೆ. ಜೈಲಿನೊಳಗೆ ಹೋಗುವ ಸೋನಿಯಾ ಗಾಂಧಿ, ಚಿದಂಬರಂ ಅವರಿಗೆ ಹೌಡಿ ಚಿದಂಬರಂ ಸಾಹಿಬ್ ಎನ್ನುತ್ತಾರೆ. ಇದನ್ನು ಕೇಳಿ ಸಿಟ್ಟಾಗುವ ಚಿದು, ಅದು ಹೌಡಿ ಮೋದಿ, ಹೌಡಿ ಚಿದಂಬರಂ ಅಲ್ಲ ಎಂದು ಹೇಳುತ್ತಾರೆ.


ವಾಸುದೇವ್ ಭಾರದ್ವಾಜ್ ಅವರ ಪ್ರಕಾರ, ಸೋನಿಯಾ ಹಾಗೂ ಮನಮೋಹನ್ ಸಿಂಗ್ ತಿಹಾರ್ ಜೈಲಿಗೆ ಭೇಟಿ ಕೊಟ್ಟಿದ್ದು, ಚಿದು ಅವರಿಗೆ ಸೊಳ್ಳೆ ಬತ್ತಿ ಕೊಡೋದಕ್ಕಾಗಿ ಅಂತೆ!



ರೂಪಂ ನಾಥ್ ಎಂಬುವರ ಪ್ರಕಾರ, ಜೈಲಿನೊಳಗೆ ನಡೆದಿರುವ ಮಾತುಕತೆ ಏನು ಅನ್ನೋದನ್ನ ನೋಡಿ ‘ನೋಡು ತಮ್ಮಾ, ಏನಾದ್ರೂ ಆಗಿಹೋಗ್ಲಿ ನಮ್ಮ ಹೆಸರನ್ನು ಮಾತ್ರ ಹೇಳಬೇಡ’ ಎಂದು ಚಿದು ಜೊತೆ ಸೋನಿಯಾ ಹಾಗೂ ಮನಮೋಹನ್ ಸಿಂಗ್ ಚರ್ಚೆ ಮಾಡಿದ್ರಾ ಎಂದು ಲೇವಡಿ ಮಾಡಿದ್ದಾರೆ.


ಚಿದಂಬರಂ ಅವರನ್ನು ಸೋನಿಯಾ ಹಾಗೂ ಮನಮೋಹನ್ ಸಿಂಗ್ ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಬಹುಪಾಲು ಟ್ವೀಟ್‌ಗಳು ಭೇಟಿಯ ವಿರುದ್ಧವಾಗಿಯೇ ಇದೆ. ಕಾಂಗ್ರೆಸ್ ಅಧಿನಾಯಕಿ ನಡೆಯನ್ನು ಸಮರ್ಥಿಸುವ ಟ್ವೀಟ್‌ ತುಂಬಾನೇ ವಿರಳವಾಗಿವೆ.

‘ಆಪರೇಷನ್ POK’ ಪ್ಲಾನ್ ರೆಡಿ!: ಭಾರತೀಯ ಸೇನೆ ಟಾರ್ಗೆಟ್ ‘ಪಾಕ್ ಆಕ್ರಮಿತ ಕಾಶ್ಮೀರ’

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ