ಆ್ಯಪ್ನಗರ

ವೀರಯೋಧ ಅಭಿನಂದನ್‌ಗೆ ಕಾದಿದೆ ಹಲವು ಪರೀಕ್ಷೆ

1970ರ ದಶಕದ ಮಿಗ್‌-21 ಬೈಸನ್‌ ಫೈಟರ್‌ ಜೆಟ್‌ ಮೂಲಕ ನಾಲ್ಕನೇ ಪೀಳಿಗೆಯ ಅಮೆರಿಕ ನಿರ್ಮಿತ ಪಾಕ್‌ನ ಎಫ್‌-16 ಯುದ್ಧ ವಿಮಾನ ಹೊಡೆದುರುಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌......

Vijaya Karnataka Web 2 Mar 2019, 5:30 am
ಹೊಸದಿಲ್ಲಿ: 1970ರ ದಶಕದ ಮಿಗ್‌-21 ಬೈಸನ್‌ ಫೈಟರ್‌ ಜೆಟ್‌ ಮೂಲಕ ನಾಲ್ಕನೇ ಪೀಳಿಗೆಯ ಅಮೆರಿಕ ನಿರ್ಮಿತ ಪಾಕ್‌ನ ಎಫ್‌-16 ಯುದ್ಧ ವಿಮಾನ ಹೊಡೆದುರುಳಿಸಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಸಾಹಸಗಾಥೆಗೆ ಇಡೀ ದೇಶವೇ ಸಲಾಂ ಹೊಡೆದಿದೆ.
Vijaya Karnataka Web ಅಭಿನಂದನ್‌
ಅಭಿನಂದನ್‌


ವೈರಿ ದೇಶದಲ್ಲಿದ್ದರೂ ಅವರು ದೇಶದ ಸೇನೆಯ ಚಲನವಲನಗಳ ಬಗ್ಗೆ ಇನಿತೂ ಗುಟ್ಟು ಬಿಟ್ಟುಕೊಡಲಿಲ್ಲ. ಆದಾಗ್ಯೂ ಒಮ್ಮೆ ಯೋಧ/ಪೈಲಟ್‌ ಹೋರಾಟದ ವೇಳೆ ಶತ್ರು ರಾಷ್ಟ್ರಕ್ಕೆ ಸಿಲುಕಿ ನಂತರ ಅವರನ್ನು ವಾಪಸ್‌ ಪಡೆದುಕೊಂಡ ಸಂದರ್ಭದಲ್ಲಿ ವಾಯುಪಡೆ/ನೌಕಾಪಡೆ/ಭೂಸೇನೆ ನಿರ್ದಿಷ್ಟ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.

ಶತ್ರು ರಾಷ್ಟ್ರಕ್ಕೆ ಸೆರೆ ಸಿಕ್ಕಿ ಬಂದವರು ಗುಟ್ಟು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಅಂತಹವರನ್ನು ಹಲವು ರೀತಿಯ ದೈಹಿಕ ಮತ್ತು ಮಾನಸಿಕ ತಪಾಸಣೆಗಳಿಗೆ ಒಳಪಡಿಸಲಾಗುತ್ತದೆ ಎನ್ನುತ್ತಾರೆ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಎಚ್‌.ಎಸ್‌.ಪನಾಗ್‌. ಅಭಿನಂದನ್‌ ಈ ಎಲ್ಲ ತಪಾಸಣೆಗಳಿಗೆ ಒಳಗಾಗಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು.

* ಭವ್ಯ ಸ್ವಾಗತದ ಬಳಿಕ ಅಭಿನಂದನ್‌ ಅವರನ್ನು ವಾಯುಪಡೆಯ ಗುಪ್ತಚರ ದಳ ಕರೆದೊಯ್ಯುತ್ತದೆ.

* ಅಲ್ಲಿ ಅವರ ಮಾನಸಿಕ ಮತ್ತು ದೈಹಿಕ ಸದೃಢತೆಯ ಮಟ್ಟ ಪರೀಕ್ಷಿಸಲು ಹಲವು ತಪಾಸಣೆಗಳನ್ನು ನಡೆಸಲಾಗುತ್ತದೆ.

* ಪಾಕ್‌ ಸೇನೆ ಅವರ ದೇಹದಲ್ಲಿ ಏನಾದರೂ ವಸ್ತು ಇರಿಸಿದೆಯೇ ಎಂಬುದರ ಖಾತ್ರಿಗೆ ಸ್ಕ್ಯಾ‌ನಿಂಗ್‌ ಮಾಡಲಾಗುತ್ತದೆ.

* ಅಭಿನಂದನ್‌ ಅವರ ರಕ್ತದ ಮಾದರಿಗಳನ್ನು ಹಲವು ರೀತಿಯ ತಪಾಸಣೆಗಳಿಗೆ ಒಳಪಡಿಸಲಾಗುತ್ತದೆ.

* ಹಲವು ಬಗೆಯ ಮನೋ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.

* ಕೊನೆಯದಾಗಿ, 'ರಾ' ಮತ್ತು ಭಾರತೀಯ ಗುಪ್ತಚರ ದಳದಿಂದ ವಿಚಾರಣೆ ಎದುರಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ