ಆ್ಯಪ್ನಗರ

ಆರೆಸ್ಸೆಸ್‌ ಇಲ್ಲದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ ಎಂದ ಬಿಜೆಪಿ ನಾಯಕ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಸ್ತಿತ್ವದಲ್ಲಿಲ್ಲದಿದ್ದರೆ ಭಾರತವೇ ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕ ವ್ಯಾಖ್ಯಾನಿಸಿದ್ದಾರೆ.

Vijaya Karnataka 16 Sep 2019, 7:48 am
ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ಶಕ್ತಿಶಾಲಿ ಚಳವಳಿಯಾಗಿದ್ದು, ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬಿಜೆಪಿ ಮುಖಂಡ ಸತೀಶ್‌ ಪೂನಿಯಾ ಬಣ್ಣಿಸಿದ್ದಾರೆ.
Vijaya Karnataka Web RSS


ಆರೆಸ್ಸೆಸ್‌ ಹಿನ್ನೆಲೆಯ ಪೂನಿಯಾ ಅವರನ್ನು ಶನಿವಾರ ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಅವರು ಸಂಘದ ಬಗ್ಗೆ ಶ್ಲಾಘನೆಯ ಮಳೆ ಸುರಿಸಿದ್ದಾರೆ.

'' ಆರೆಸ್ಸೆಸ್‌ ಎಂಬುದು ಒಂದು ಪದವಲ್ಲ, ಅದೊಂದು ಚಳವಳಿ. ನನ್ನ ಪ್ರಕಾರ ಆರೆಸ್ಸೆಸ್‌ ಇಲ್ಲದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ. ಆರೆಸ್ಸೆಸ್‌ನಿಂದಾಗಿಯೇ ಇಂದು 'ಕೇಸರಿ'ಗೆ ಎಲ್ಲೆಡೆ ಇಷ್ಟು ದೊಡ್ಡ ಪ್ರಮಾಣದ ಗೌರವ ಸಿಗುತ್ತಿದೆ,'' ಎಂದಿದ್ದಾರೆ.

ಐತಿಹಾಸಿಕ ಸತ್ಯಗಳನ್ನು ಮುಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ದೇಶ ವಿಭಜನೆಗೆ ಕಾರಣವಾದವರು ಯಾರು? ಮೊಘಲರು ಮತ್ತು ಬ್ರಿಟಿಷರ ಜತೆ ಯಾರು ಹೊಂದಾಣಿಕೆಯನ್ನು ಹೊಂದಿದ್ದರು ಎಂದು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೇ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ