ಆ್ಯಪ್ನಗರ

ಡ್ರಗ್‌ ಚಟಕ್ಕೆ ದೂಡಿ ರೇಪ್‌ ಮಾಡಿದ ಡಿಎಸ್ಪಿ: ಮಹಿಳೆ ಆರೋಪ

ಹೆರಾಯಿನ್‌ ಸೇವನೆ ಚಟಕ್ಕೆ ತಳ್ಳಿ ಅತ್ಯಾಚಾರ ನಡೆಸಿರುವುದಾಗಿ ಲೂಧಿಯಾನದ ಮಹಿಳೆಯೊಬ್ಬರು ಆರೋಪಿಸಿರುವ ಹಿನ್ನೆಲೆಯಲ್ಲಿ ಪಂಜಾಬ್‌ ಪೊಲೀಸ್‌ ಇಲಾಖೆಯ ಡಿಎಸ್‌ಪಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

TIMESOFINDIA.COM 29 Jun 2018, 12:45 pm
ಜಲಂಧರ್‌: ಹೆರಾಯಿನ್‌ ಸೇವನೆ ಚಟಕ್ಕೆ ತಳ್ಳಿ ಅತ್ಯಾಚಾರ ನಡೆಸಿರುವುದಾಗಿ ಲೂಧಿಯಾನದ ಮಹಿಳೆಯೊಬ್ಬರು ಆರೋಪಿಸಿರುವ ಹಿನ್ನೆಲೆಯಲ್ಲಿ ಪಂಜಾಬ್‌ ಪೊಲೀಸ್‌ ಇಲಾಖೆಯ ಡಿಎಸ್‌ಪಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
Vijaya Karnataka Web woman


ಮಹಿಳೆಯು ಜಲಂಧರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಆರೋಪ ಮಾಡಿದ ಬಳಿಕ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು, ಡಿಜಿಪಿ ಸುರೇಶ್‌ ಅರೋರಾ ತಪ್ಪಿತಸ್ಥ ಎಂದು ಕಂಡು ಬಂದರೆ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದರು.

ಮಹಿಳೆ ಮಾಡಿರುವ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಐಪಿಎಸ್‌ ಅಧಿಕಾರಿ ಅನಿತಾ ಪುಂಜ್‌ ಹೇಳಿದ್ದಾರೆ.

ಮುಖ್ಯಮಂತ್ರಿಗೆ ವಿವರವಾದ ಪತ್ರ ಬರೆದಿದ್ದ ಮಹಿಳೆ, ಹೆರಾಯಿನ್‌ ಅನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಡಿಎಸ್ಪಿ ತೋರಿಸಿದ್ದರು. ಹೆರಾಯಿನ್‌ ಮಾರಾಟದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅವಿವಾಹಿತ ಮಹಿಳೆಯರು ಬೇಕೆಂದು ಕೇಳಿದ್ದರು ಎಂಬ ಆರೋಪ ಮಾಡಿದ್ದರು.

ಡಿಎಸ್ಪಿಯನ್ನು 2013 ರಲ್ಲಿ ಧಿಲ್ಲೊನ್‌ನಲ್ಲಿರುವ ತರ್ನ್‌ ತರನ್‌ ನಿವಾಸದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ. ನನಗೆ ಮತ್ತು ನನ್ನ ಜತೆಗಿದ್ದವರಿಗೆ ಊಟ ನೀಡಿ ಜತೆಗೆ ಹೆರಾಯಿನ್‌ ಕೂಡ ತಂದಿಟ್ಟು ಸೇವಿಸುವುದು ಹೇಗೆಂದು ಹೇಳಿದರು. ಕೆಲವು ಡ್ರಗ್‌ ವಶಪಡಿಸಿಕೊಂಡಿದ್ದು, ಅದನ್ನು ಮಾರಾಟ ಮಾಡಲು ಅವಿವಾಹಿತ ಮಹಿಳೆಯರ ಸಂಪರ್ಕ ಕಲ್ಪಿಸುವಂತೆ ಕೇಳಿಕೊಂಡಿದ್ದರು, ಕೆಲವು ದಿನ ಬಿಟ್ಟು ಮಹಿಳೆಯೊಬ್ಬರನ್ನು ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾಗ ನನಗೆ ಡ್ರಗ್‌ ನೀಡಿ ಅತ್ಯಾಚಾರ ನಡೆಸಿದ್ದರು ಎಂಬುದಾಗಿ ಮಹಿಳೆ ಆರೋಪಿಸಿದ್ದಾರೆ.

ಬಳಿಕ ಡ್ರಗ್‌ ಚಟಕ್ಕೆ ಬಿದ್ದ ನಾನು ಅದೇ ವ್ಯಸನಿಯಾಗಿದ್ದ ಬಲ್‌ರಾಜ್‌ನನ್ನು ಭೇಟಿಯಾದೆ. ಆತ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಪೋಷಕರು ತನ್ನನ್ನು ಶಾಸಕಿ ಶಾಸಕಿ ಸಿಮರ್ಜಿತ್‌ ಸಿಂಗ್ ಬೈನ್ಸ್‌ ನೆರವು ಪಡೆದು ಕಪುರ್ತಲ ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದರು. ಆಕೆ ಕೂಡ ಡ್ರಗ್‌ ಚಟದಿಂದ ಗರ್ಭಪಾತಕ್ಕೆ ಒಳಗಾಗಿದ್ದರು. ಬಳಿಕ ಅವರು ವ್ಯಸನಮುಕ್ತರಾಗಿದ್ದರು. ಅವರು ನನಗೆ ಮರು ಜನ್ಮ ನೀಡಿದರು ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಸುಖ್‌ಪಾಲ್‌ ಸಿಂಗ್‌ ಖೈರಾ, ಶಾಸಕಿ ಸಿಮರ್ಜಿತ್‌ ಸಿಂಗ್ ಬೈನ್ಸ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ