ಆ್ಯಪ್ನಗರ

ಹೆರಿಗೆಗೆ ದಾಖಲಿಸದ ಆಸ್ಪತ್ರೆ: ಚರಂಡಿಯಲ್ಲೇ ಮಗುವಿನ ಜನನ

ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲು ನಿರಾಕರಿಸಿದ್ದರಿಂದ ಆ ಮಹಿಳೆ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

Vijaya Karnataka Web 16 Dec 2017, 5:03 pm
ಕೋರಾಪುಟ್‌: ಹೆರಿಗೆಗೆ ಬಂದ ದಲಿತ ಮಹಿಳೆಯನ್ನು ಅಗತ್ಯ ದಾಖಲೆಗಳಿಲ್ಲವೆಂದು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲು ನಿರಾಕರಿಸಿದ್ದರಿಂದ ಆ ಮಹಿಳೆ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
Vijaya Karnataka Web woman delivers baby in drain
ಹೆರಿಗೆಗೆ ದಾಖಲಿಸದ ಆಸ್ಪತ್ರೆ: ಚರಂಡಿಯಲ್ಲೇ ಮಗುವಿನ ಜನನ


ಹೆರಿಗೆಯಾಗಿ ಕೆಲವು ಗಂಟೆಯ ಬಳಿಕ ಶಹೀದ್ ಲಕ್ಷ್ಮಣ್ ನಾಯಕ್ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಇದೀಗ ತಾಯಿ ಮಗು ಆರೋಗ್ಯವಾಗಿದ್ದಾರೆ.

ಗರ್ಭಿಣಿ ಮಹಿಳೆ ತನ್ನ ತಾಯಿ ಮತ್ತು ತಂಗಿ ಜತೆಗೆ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಗಂಡನನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತು. ಆದರೆ ದಾಖಲೆಗಳಿಲ್ಲವೆಂದು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಿಲ್ಲ. ಇದರಿಂದಾಗಿ ಪಾಳುಬಿದ್ದ ಚರಂಡಿಯಲ್ಲಿ ಆ ಹೆಣ್ಣು ಮಗಳು ಮಗುವಿಗೆ ಜನ್ಮ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ