ಆ್ಯಪ್ನಗರ

ಹಾವು ಕಚ್ಚಿದ್ದರೂ ಮಗುವಿಗೆ ಎದೆ ಹಾಲುಣಿಸಿದ ತಾಯಿ: ಇಬ್ಬರ ಸಾವು

ಹಾವು ಕಚ್ಚಿದ ಅರಿವಿಲ್ಲದೆ ತಾಯಿಯೊಬ್ಬರು ತನ್ನ 2 ವರ್ಷದ ಮಗುವಿಗೆ ಹಾಲುಣಿಸಿದ ಪರಿಣಾಮ ತಾಯಿ ಜತೆ ಮಗುವು ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮಂಡ್ಲಾ ಗ್ರಾಮದಲ್ಲಿ ನಡೆದಿದೆ.

TIMESOFINDIA.COM 27 May 2018, 11:31 am
ಲಕ್ನೋ: ಹಾವು ಕಚ್ಚಿದ ಅರಿವಿಲ್ಲದೆ ತಾಯಿಯೊಬ್ಬರು ತನ್ನ 2 ವರ್ಷದ ಮಗುವಿಗೆ ಹಾಲುಣಿಸಿದ ಪರಿಣಾಮ ತಾಯಿ ಜತೆ ಮಗುವು ಮೃತಪಟ್ಟ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮಂಡ್ಲಾ ಗ್ರಾಮದಲ್ಲಿ ನಡೆದಿದೆ.
Vijaya Karnataka Web snake


ಗುರುವಾರ ಬೆಳಗಿನಜಾವ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಪರವೀಣ್ (25) ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಮಲಗಿದ್ದ ಮಹಿಳೆಗೆ ಹಾವು ಕಚ್ಚಿದೆ. ಆದರೆ, ನಿದ್ರೆಯ ಮಂಪರಿನಲ್ಲಿದ್ದ ಆಕೆಗದು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಕೆಯ ಪಕ್ಕದಲ್ಲಿ ಮಲಗಿದ್ದ ಮಗು ಹಸಿವೆಯಿಂದ ಅತ್ತಿದ್ದು, ಎದ್ದು ಕುಳಿತುಕೊಂಡ ಆಕೆ ಎದೆ ಹಾಲು ಕುಡಿಸಿದ್ದಾಳೆ.

ಅದಾಗಲೇ ಆಕೆಯ ದೇಹಕ್ಕೆ ಹಾವಿನ ವಿಷ ಪಸರಿಸಿದ್ದು ಹಾಲಿನ ಮೂಲಕ ಮಗುವಿನ ದೇಹ ಸೇರಿದೆ.

ಮಗು ಹಾಲು ಕುಡಿದ ಸ್ಪಲ್ಪ ಸಮಯದಲ್ಲೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದು, ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ