ಆ್ಯಪ್ನಗರ

ಯುವತಿಯನ್ನು ಚುಂಬಿಸಲು ಹೋಗಿ ಸಿಕ್ಕಿಬಿದ್ದ ಅಪರಿಚಿತ

ನಗರದ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಎಲ್ಲರೂ ನೋಡುತ್ತಿರಬೇಕಾದರೆ ಯುವತಿಯೊಬ್ಬರನ್ನು ಬರಸೆಳೆದು ಚುಂಬಿಸಲು ಪ್ರಯತ್ನಿಸಿದ ಘಟನೆಯನ್ನು ಎಎನ್‍ಐ ವರದಿ ಮಾಡಿದೆ.

Vijaya Karnataka Web 23 Feb 2018, 5:18 pm
ಮುಂಬೈ: ನಗರದ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಎಲ್ಲರೂ ನೋಡುತ್ತಿರಬೇಕಾದರೆ ಯುವತಿಯೊಬ್ಬರನ್ನು ಬರಸೆಳೆದು ಚುಂಬಿಸಲು ಪ್ರಯತ್ನಿಸಿದ ಘಟನೆಯನ್ನು ಎಎನ್‍ಐ ವರದಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.
Vijaya Karnataka Web woman molested at mumbai railway station accused held
ಯುವತಿಯನ್ನು ಚುಂಬಿಸಲು ಹೋಗಿ ಸಿಕ್ಕಿಬಿದ್ದ ಅಪರಿಚಿತ


ನವಿ ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬರು ರೈಲಿಗಾಗಿ ಕಾಯುತ್ತಿರಬೇಕಾದರೆ ಈ ಘಟನೆ ನಡೆದಿದೆ. ಆಕೆ ನಿಂತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಸಮೀಪಕ್ಕೆ ಬಂದು ಆಕೆಯನ್ನು ಬರಸೆಳೆದು ಚುಂಬಿಸಲು ಪ್ರಯತ್ನಿಸುತ್ತಾನೆ. ಅಪರಿಚಿತ ವ್ಯಕ್ತಿಯನ್ನು ದೂರ ತಳ್ಳಿ ಕಿರುಚಿಕೊಂಡ ಕಾರಣ ಅವ ಅಲ್ಲಿಂದ ಕಾಲ್ಕಿತ್ತಿದ್ದಾನೆ.

#WATCH: Girl molested at Turbhe railway station in Navi Mumbai yesterday; accused has been arrested after complaint #Maharashtra pic.twitter.com/kwUfFhCZZG — ANI (@ANI) February 23, 2018 ಈ ಹಠಾತ್ ಬೆಳವಣಿಗೆಯಿಂದ ಆ ಯುವತಿ ಶಾಕ್‌ಗೆ ಒಳಗಾಗಿದ್ದಾರೆ. ವಿಶೇಷ ಎಂದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಕ್ಕಪಕ್ಕದಲ್ಲಿದ್ದ ಪ್ರಯಾಣಿಕರು ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಕ್‍ನಿಂದ ಹೊರಬಂದ ಯುವತಿ ಕೂಡಲೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ವೀಡಿಯೋ ಆಧಾರವಾಗಿ ಆರೋಪಿಯನ್ನು ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ