ಆ್ಯಪ್ನಗರ

ತಾಯಿಯ ಸಹಾಯದಿಂದ ಮಾವನ ಜೀವಂತ ದಹನ ಮಾಡಿದ ಸೊಸೆ

ತಿರುವಲನಂಗಾಡಿನಲ್ಲಿ ಈ ಕೃತ್ಯ ನಡೆದಿದ್ದು ಮೃತರನ್ನು ಸಬಾಪತಿ (65) ಎಂದು ಗುರುತಿಸಲಾಗಿದೆ.

TIMESOFINDIA.COM 10 May 2019, 4:06 pm
ಚೆನ್ನೈ: ಮಹಿಳೆಯೊಬ್ಬಳು ತನ್ನ ತಾಯಿಯ ಸಹಾಯದಿಂದ ಗಂಡನ ತಂದೆಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
Vijaya Karnataka Web Fire- Kill


ತಿರುವಲನಂಗಾಡಿನಲ್ಲಿ ಈ ಕೃತ್ಯ ನಡೆದಿದ್ದು ಮೃತರನ್ನು ಸಬಾಪತಿ (65) ಎಂದು ಗುರುತಿಸಲಾಗಿದೆ.

ಸಬಾಪತಿ ಪುತ್ರ ಪ್ರಭಾಕರನ್ ಕಳೆದ 6 ವರ್ಷಗಳ ಹಿಂದೆ ಗಾಯತ್ರಿ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿಗೆ ಒಬ್ಬ ಮಗನಿದ್ದಾನೆ. ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲ ದಿನಗಳ ಬಳಿಕ ದಂಪತಿ ನಡುವೆ ವೈಮನಸ್ಸುಂಟಾಗಿ ಬೇರೆಯಾಗಿದ್ದರು.

ಏಪ್ರಿಲ್ 11ರಂದು ಪ್ರಭಾಕರನ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾದರು. ಇದನ್ನು ಕೇಳಿದ ಗಾಯತ್ರಿ ಕೋಪ ನೆತ್ತಿಗೇರಿ ತಾಯಿ ಕಲಾವತಿ(57)ಯೊಂದಿಗೆ ಪತಿಯ ಮನೆಗೆ ಬಂದಿದ್ದಾಳೆ.

ಆ ಸಂದರ್ಭದಲ್ಲಿ ಸಬಾಪತಿಯೊಬ್ಬರೆ ಮನೆಯಲ್ಲಿದ್ದರು. ಆತನೊಂದಿಗೆ ಜಗಳಕ್ಕಿಳಿದ ತಾಯಿ- ಮಗಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.

ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಸೇರಿಸಿದರಾದರೂ ಪ್ರಯೋಜನವಾಗಲಿಲ್ಲ.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ