ಆ್ಯಪ್ನಗರ

15ವರ್ಷದ ವಿದ್ಯಾರ್ಥಿಯನ್ನು ಕಾಮತೃಷೆಗೆ ಬಳಸಿಕೊಂಡ 33 ವರ್ಷದ ಶಿಕ್ಷಕಿ

ಮನೆಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ 15 ವರ್ಷದ ಬಾಲಕನನ್ನು 33 ವರ್ಷದ ಶಿಕ್ಷಕಿ ಲೈಂಗಿಕವಾಗಿ ಬಳಸಿಕೊಂಡ ಹೇಯ ಕೃತ್ಯ ಚಂಡೀಗಡದಲ್ಲಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ ತಿಂಗಳಿಂದ ಶಿಕ್ಷಕಿ ನಿರಂತರವಾಗಿ ಆತನ ಮೇಲೆ ದೈಹಿಕ ಶೋಷಣೆ ನಡೆಸಿದ್ದಳು ಎಂದು ಹೇಳಲಾಗುತ್ತಿದೆ.

TIMESOFINDIA.COM 25 May 2018, 3:19 pm
ಚಂಡೀಗಡ: ಮನೆಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ 15 ವರ್ಷದ ಬಾಲಕನನ್ನು 33 ವರ್ಷದ ಶಿಕ್ಷಕಿ ಲೈಂಗಿಕವಾಗಿ ಬಳಸಿಕೊಂಡ ಹೇಯ ಕೃತ್ಯ ಚಂಡೀಗಡದಲ್ಲಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ ತಿಂಗಳಿಂದ ಶಿಕ್ಷಕಿ ನಿರಂತರವಾಗಿ ಆತನ ಮೇಲೆ ದೈಹಿಕ ಶೋಷಣೆ ನಡೆಸಿದ್ದಳು ಎಂದು ಹೇಳಲಾಗುತ್ತಿದೆ.
Vijaya Karnataka Web Abused


10 ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ವಾಸಿಸುವ ಪ್ರದೇಶದಲ್ಲಿ ಶಿಕ್ಷಕಿ ವಾಸಿಸುತ್ತಿದ್ದು, ಬಾಲಕ ಅವಳ ಬಳಿ ಮನೆಪಾಠಕ್ಕೆ ಹೋಗುತ್ತಿದ್ದ. ಮನೆಪಾಠ ಹೇಳಿಸಿಕೊಂಡ ಬಳಿಕವೂ ಪುತ್ರ ಓದಿನಲ್ಲಿ ಪ್ರಗತಿ ಕಾಣದಿದ್ದಕ್ಕೆ ಚಿಂತೆಗೀಡಾದ ಪೋಷಕರು ಆತನನ್ನು ಆಕೆಯಲ್ಲಿಗೆ ಕಳುಹಿಸದಿರಲು ನಿರ್ಧರಿಸಿದರು. ಇದರಿಂದ ಸಿಟ್ಟಿಗೆದ್ದ ಆಕೆ ಬಾಲಕನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ.

ನೆರೆಹೊರೆಯವರ ಸಹಾಯದಿಂದ ಬಾಲಕನನ್ನು ಅಲ್ಲಿಂದ ಬಿಡಿಸಿಕೊಂಡ ಹೋದ ಪೋಷಕರನ್ನು ಹಿಂಬಾಲಿಸಿ ಶಿಕ್ಷಕಿ ಅವರ ಮನೆಗೆ ಬಂದು ಕೂಗಾಡಿದ್ದಾಳೆ ಮತ್ತು ಅವರ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಪೊಲೀಸರಿಗೆ ಕರೆ ಮಾಡಿದ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಬಾಲಕನನ್ನು ಆಪ್ತಸಮಾಲೋಚನೆಗೆ ಒಳಪಡಿಸಲಾಗಿದ್ದು ಶಿಕ್ಷಕಿ ಬಾಲಕನ ಮೇಲೆ ಆಕ್ರಮಣಕಾರಿ ಅಷ್ಟೇ ಅಲ್ಲ ಅತೀವ ಪೊಸೆಸಿವ್ ಆಗಿದ್ದಳು ಎಂದು ತಿಳಿದು ಬಂದಿದೆ.


ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಶಿಕ್ಷಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ