ಆ್ಯಪ್ನಗರ

MLA ವಿರುದ್ಧ ಅತ್ಯಾಚಾರ ಪ್ರಕರಣ: ಯುವತಿ ಶವವಾಗಿ ಪತ್ತೆ

ಸಮಾಜವಾದಿ ಪಕ್ಷದ ವಿಧಾನ ಸಭಾ ಸಧಸ್ಯನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯ ದೇಹ ಶವವಾಗಿ ಪತ್ತೆಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 13 Feb 2017, 5:20 pm
ಲಖನೌ: ಸಮಾಜವಾದಿ ಪಕ್ಷದ ವಿಧಾನ ಸಭಾ ಸಧಸ್ಯನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯ ದೇಹ ಶವವಾಗಿ ಪತ್ತೆಯಾಗಿದೆ.
Vijaya Karnataka Web woman who accused sp mla of rape found dead
MLA ವಿರುದ್ಧ ಅತ್ಯಾಚಾರ ಪ್ರಕರಣ: ಯುವತಿ ಶವವಾಗಿ ಪತ್ತೆ


ಸಮಾಜವಾದಿ ಪಕ್ಷದ ಎಂಎಲ್‌ಎ ಅರುಣ್‌ ವರ್ಮಾ ಹಾಗೂ ಮತ್ತೊಬ್ಬ ವ್ಯಕ್ತಿ ವಿರುದ್ಧ 2013ರಲ್ಲಿ ಮೃತ ಮಹಿಳೆ ಸಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ ಕಳೆದ ಶನಿವಾರದಿಂದ ಈಕೆ ಅಪಹರಣಗೊಂಡಿದ್ದು, ಭಾನುವಾರದಂದು ಈಕೆಯ ದೇಹ ಜೈಸಿಂಗ್‌ಪುರ್‌ನ ಶಾಲೆಯೊಂದರ ಬಳಿ ಪತ್ತೆಯಾಗಿತ್ತು.

ಮೃತ ಮಹಿಳೆಯ ದೇಹದಲ್ಲಿ ಗಾಯದ ಗುರುತುಗಳಿದ್ದು ಶವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರುಣ್‌ ವರ್ಮಾ ಸುಲ್ತಾನ್‌ ಪುರದಿಂದ ಸ್ಪರ್ಧಿಸುತ್ತಿದ್ದು, ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

2013ರಲ್ಲಿ ಈಕೆಯ ಮೇಲೆ ಅತ್ಯಾಚಾರ ನಡೆದಿದ್ದ ಎಸ್‌ಪಿ ಎಂಎಲ್‌ಎ ವಿರುದ್ಧ ಯುವತಿ ಪ್ರಕರಣದ ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯದ ಹಂತದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ