ಆ್ಯಪ್ನಗರ

ಕುಟುಂಬದ ವಿರೋಧ ಲೆಕ್ಕಿಸದೆ ಕೋರ್ಟ್ ಮೆಟ್ಟಿಲೇರಿ ಸೈನಿಕನಿಗೆ ಕಿಡ್ನಿ ದಾನ ಮಾಡಿದ ಮಹಿಳೆ

ತರರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಸಹಾಯ ಮಾಡಲು ಅಡ್ಡಿಪಡಿಸುತ್ತಿದ್ದಾರೆಂದು ಕೋರ್ಟ್ ಮೆಟ್ಟಿಲೇರಿದ ವಿಶಾಲ ಹೃದಯಿಯ ಅಪರೂಪದ ಕಥೆ ಇದು. ಆಕೆ ಸೇನಾಧಿಕಾರಿಯಾಗಿರುವ ತನ್ನ ಸ್ನೇಹಿತನಿಗೆ ಕಿಡ್ನಿ ದಾನ ಮಾಡಲು ಬಯಸಿದ್ದಳು. ಇದನ್ನು ವಿರೋಧಿಸಿದ್ದ ಕುಟುಂಬ ಸರಕಾರವನ್ನು ಸಹ ಈ ಪ್ರಕರಣದಲ್ಲಿ ಎಳೆದು ತಂದಿತ್ತು. ಆದರೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದ ಮಹಿಳೆ ಕೋರ್ಟ್ ಮೆಟ್ಟಿಲೇರಿ ಕಿಡ್ನಿ ದಾನ ಮಾಡಲು ಅನುಮತಿ ಪಡೆದುಕೊಂಡರು.

TIMESOFINDIA.COM 31 Jul 2018, 1:53 pm
ಬೆಂಗಳೂರು: ಇತರರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ಸಹಾಯ ಮಾಡಲು ಅಡ್ಡಿಪಡಿಸುತ್ತಿದ್ದಾರೆಂದು ಕೋರ್ಟ್ ಮೆಟ್ಟಿಲೇರಿದ ವಿಶಾಲ ಹೃದಯಿಯ ಅಪರೂಪದ ಕಥೆ ಇದು. ಆಕೆ ಸೇನಾಧಿಕಾರಿಯಾಗಿರುವ ತನ್ನ ಸ್ನೇಹಿತನಿಗೆ ಕಿಡ್ನಿ ದಾನ ಮಾಡಲು ಬಯಸಿದ್ದಳು. ಇದನ್ನು ವಿರೋಧಿಸಿದ್ದ ಕುಟುಂಬ ಸರಕಾರವನ್ನು ಸಹ ಈ ಪ್ರಕರಣದಲ್ಲಿ ಎಳೆದು ತಂದಿತ್ತು. ಆದರೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದ ಮಹಿಳೆ ಕೋರ್ಟ್ ಮೆಟ್ಟಿಲೇರಿ ಕಿಡ್ನಿ ದಾನ ಮಾಡಲು ಅನುಮತಿ ಪಡೆದುಕೊಂಡರು.
Vijaya Karnataka Web kidney


ಹೌದು, ಕ್ಯಾಪ್ಟನ್ ಪಂಕಜ್ ಭಾರ್ಗವ ಅವರಿಗೆ ತುರ್ತಾಗಿ ಕಿಡ್ನಿ ಕಸಿ ಆಗಬೇಕಿತ್ತು. ಅವರ ಸ್ನೇಹಿತೆ ವರ್ಷಾ ಶರ್ಮಾ ತಮ್ಮ ಒಂದು ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದರು. ಆದರೆ ಅವರದೇ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ವರ್ಷಾಗೆ ಅನುಮತಿ ನೀಡದಂತೆ ಆರೋಗ್ಯ ಇಲಾಖೆಯನ್ನು ಮಧ್ಯ ತರಲು ಕುಟುಂಬ ಯಶಸ್ವಿಯಾಗಿತ್ತು. ಸ್ವಯಂ ಪ್ರೇರಿತವಾಗಿ ಕಿಡ್ನಿ ದಾನ ಮಾಡ ಹೊರಟಿದ್ದರೂ ಆರೋಗ್ಯ ಇಲಾಖೆ ಅನುಮತಿ ನೀಡಲು ವಿಳಂಬ ಮಾಡುತ್ತಿದೆಯೆಂದು ವರ್ಷಾ ಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಗ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಲ್ಲದೇ, ಕೂಡಲೇ ಸಮಿತಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗಡುವು ವಿಧಿಸಿತ್ತು. ಹೈಕೋರ್ಟ್ ಬಿಸಿ ತಟ್ಟಿದ ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಭಾರ್ಗವ್ ಅವರಿಗೆ ಕಿಡ್ನಿ ದಾನ ಮಾಡಲು ವರ್ಷಾ ಅವರಿಗೆ ಅನುಮತಿ ನೀಡಿದೆ.

ಅಂತೂ ಹೋರಾಟ ನಡೆಸಿ ಗೆದ್ದ ವರ್ಷಾ ಕಳೆದ 27ರಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ತಮ್ಮ ಸ್ನೇಹಿತರಿಗೆ ಕಿಡ್ನಿ ದಾನ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ