ಆ್ಯಪ್ನಗರ

Kolhapur: ನಮ್ಮಿಬ್ಬರಲ್ಲಿ ಒಬ್ಬರನ್ನು ಮದುವೆಯಾಗು ಅಂದಿದ್ದಕ್ಕೆ ಪೇದೆ ಆತ್ಮಹತ್ಯೆ

ವಿವಾಹಿತನಾಗಿದ್ದರೂ ಮತ್ತಿಬ್ಬರ ಜತೆಗೆ ಪೇದೆ ಹೊಂದಿದ್ದ ಅಕ್ರಮ ಸಂಬಂಧ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.

TIMESOFINDIA.COM 1 Oct 2018, 1:52 pm
ಕೊಲ್ಹಾಪುರ: ಮಹಿಳಾ ಸಹೋದ್ಯೋಗಿಗಳಿಬ್ಬರು ಮದುವೆಯಾಗು ಎಂದು ಕಾಡಿದ್ದಕ್ಕೆ ಬೇಸತ್ತು 42 ವರ್ಷದ ಪೊಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ಪೇದೆ ಆ ಇಬ್ಬರು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.
Vijaya Karnataka Web Death


ಪೇದೆ ಇಬ್ಬರು ಸಹೋದ್ಯೋಗಿಗಳೊಂದಿಗೆ ಸಂಬಂಧ ಹೊಂದಿದ್ದು, ತಮ್ಮಲ್ಲಿ ಒಬ್ಬಳನ್ನು ಮದುವೆಯಾಗುವಂತೆ ಅವರಿಬ್ಬರು ಒತ್ತಡ ಹೇರುತ್ತಿದ್ದರು. ಆದರೆ ಈಗಾಗಲೇ ವಿವಾಹಿತನಾಗಿದ್ದ ಅವರಿಬ್ಬರ ಕಾಟಕ್ಕೆ ಬೇಸತ್ತು ವಿಷ ಸೇವಿಸಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದ್ದಾನೆ. ಮೃತನ ಪತ್ನಿ ಇಬ್ಬರು ಮಹಿಳಾ ಪೇದೆಗಳ ವಿರುದ್ಧ ದೂರು ದಾಖಲಿದ್ದಾಳೆ, ಎಂದು ರಾಜಾರಾಮಪುರಿ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಆರೋಪವನ್ನೆದುರಿಸುತ್ತಿರುವ ಮಹಿಳಾ ಪೊಲೀಸ್ ಪೇದೆಯರಿಬ್ಬರು ಮತ್ತು ಮೃತ ಪೇದೆ 2012ರಿಂದ 2014ರವರೆಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರ ನಡುವಿನ ಸಂಬಂಧದ ಬೆಳಕಿಗೆ ಬಂದಾಗ ಹಿರಿಯ ಪೊಲೀಸ್ ಅಧಿಕಾರಿಗಳವರನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಿದ್ದರು.

ವರ್ಗಾವಣೆ ಬಳಿಕ ಸಹ ನನ್ನ ಪತಿಯ ಜತೆ ಸಂಪರ್ಕವನ್ನಿಟ್ಟುಕೊಂಡಿದ್ದ ಇಬ್ಬರು ತಮ್ಮ ಜತೆಗಿನ ಸಂಬಂಧವನ್ನು ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದರು. ಅವರಲ್ಲೊಬ್ಬಾಕೆ ನನಗೆ ಫೋನ್ ಕರೆ ಮಾಡಿ ಪತಿಯಿಂದ ವಿಚ್ಛೇದನ ಪಡೆಯುವಂತೆ ಧಮ್ಕಿ ಹಾಕಿದ್ದಳು. ಅವರಿಬ್ಬರ ದೌರ್ಜನ್ಯ ಸಹಿಸಲಾಗದೆ ಪತಿ ಸೆಪ್ಟೆಂಬರ್ 24ಕ್ಕೆ ವಿಷ ಸೇವಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಪ್ರಾಣ ಬಿಟ್ಟರು ಎಂದು ಮೃತನ ಪತ್ನಿ ತಿಳಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ