ಆ್ಯಪ್ನಗರ

ಮಹಿಳೆಯರು ಅತ್ಯಂತ ಅಸುರಕ್ಷಿತ: ಸಮೀಕ್ಷೆ ತಳ್ಳಿಹಾಕಿದ ಮಹಿಳಾ ಆಯೋಗ

ಇಡೀ ಜಗತ್ತಿನಲ್ಲೇ ಮಹಿಳೆಯರ ಪಾಲಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.

Vijaya Karnataka 27 Jun 2018, 9:54 am
ಹೊಸದಿಲ್ಲಿ: ಇಡೀ ಜಗತ್ತಿನಲ್ಲೇ ಮಹಿಳೆಯರ ಪಾಲಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಆಫಘಾನಿಸ್ತಾನ ಮತ್ತು ಸಿರಿಯಾಗಿಂತ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಥಾಮ್ಸನ್‌ ರಾಯಿಟರ್ಸ್‌ ಫೌಂಡೇಷನ್‌ ಸಮೀಕ್ಷೆ ತಿಳಿಸಿದೆ. ಆದರೆ, ಸಮೀಕ್ಷಾ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಸಮೀಕ್ಷೆಗೆ ಬಳಸಿದ ಮಾದರಿ ಅತ್ಯಂತ ಕಡಿಮೆ ಇದ್ದು, ಅದು ಇಡೀ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Vijaya Karnataka Web women insecurity


ದೇಶದಲ್ಲಿ ಮಹಿಳಾ ಸಂಬಂಧಿತ ಅಪರಾಧಗಳ ಸಂಖ್ಯೆ ಅಷ್ಟೇನೂ ಹೆಚ್ಚಾಗಿಲ್ಲ. ಬದಲಿಗೆ ಮೊದಲಿಗಿಂತಲೂ ಈಗ ಹೆಚ್ಚಿನ ಮಹಿಳೆಯರು ತಮ್ಮ ವಿರುದ್ಧ ನಡೆದ ಅಪರಾಧಗಳನ್ನು ವರದಿ ಮಾಡುತ್ತಿರುವುದರಿಂದ ಈ ಸಂಖ್ಯೆ ಹೆಚ್ಚಾಗಿರುವಂತೆ ಭಾಸವಾಗುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ಮಾ.26ರಿಂದ ಮೇ 4ರ ವರೆಗೆ ನಡೆದ ಈ ಸಮೀಕ್ಷೆಗಾಗಿ ಜಾಗತಿಕವಾಗಿ ಒಟ್ಟು 550 ಮಂದಿ ಭಾಗವಹಿಸಿದ್ದು, ಭಾರತದ ಮೂಲದ 43 ಮಹಿಳೆಯರನ್ನು ಆರೋಗ್ಯ ರಕ್ಷ ಣೆ, ಆರ್ಥಿಕ ಸಂಪನ್ಮೂಲಗಳು ಮತ್ತು ತಾರತಮ್ಯ, ಸಾಂಪ್ರದಾಯಿಕ ಆಚರಣೆ, ಲೈಂಗಿಕ ಹಿಂಸಾಚಾರ, ಅಶ್ಲೀಲತೆ ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ