ಆ್ಯಪ್ನಗರ

ಅಸಹಜ ಲೈಂಗಿಕ ಕ್ರಿಯೆ: ಪತಿ ವಿರುದ್ಧ ಪತ್ನಿ ದೂರು

ಭಾರತೀಯ ದಂಡಸಂಹಿತೆಯ ಸೆ. 377ರ ಪ್ರಕಾರ ನಿರಪರಾಧೀಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪು ಕಾದಿರಿಸಿದ್ದರೆ, ಮತ್ತೊಂದೆಡೆ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿರುವ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಿಳೆಯೋರ್ವಳು ಸುಪ್ರೀಂಕೋರ್ಟ್ ಮೊರೆಹೋಗಿದ್ದಾಳೆ.

Vijaya Karnataka Web 19 Jul 2018, 5:49 pm
ಹೊಸದಿಲ್ಲಿ: ಭಾರತೀಯ ದಂಡಸಂಹಿತೆಯ 377ನೇ ವಿಧಿ ಪ್ರಕಾರ ನಿರಪರಾಧೀಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪು ಕಾದಿರಿಸಿದ್ದರೆ, ಮತ್ತೊಂದೆಡೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿರುವ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಹಿಳೆಯೊಬ್ಬರು ಸುಪ್ರೀಂಕೋರ್ಟ್ ಮೊರೆಹೋಗಿದ್ದಾರೆ.
Vijaya Karnataka Web Section 377


ಈ ಬಗ್ಗೆ ನ್ಯಾ. ಎನ್‌. ವಿ. ರಮಣ ಮತ್ತು ನ್ಯಾ. ಎಂ. ಎಂ. ಶಾಂತನಗೌಡರ್‌ ಮಹಿಳೆಯ ಪತಿಗೆ ನೋಟಿಸ್ ಜಾರಿಮಾಡಿದ್ದಾರೆ. ಸೆ. 377ರ ಅಡಿಯಲ್ಲಿ ನೈಸರ್ಗಿಕ ನಿಯಮಕ್ಕೆ ವಿರುದ್ಧವಾದ ಲೈಂಗಿಕಿ ಕ್ರಿಯೆಯ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಕೂಡಲೇ ಸುಪ್ರೀಂಕೋರ್ಟ್‌ ಅದನ್ನು ಜಾರಿಗೆ ತಂದು, ಪತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾಳೆ.

ನಾಲ್ಕು ವರ್ಷದ ಹಿಂದೆ ದಂಪತಿ ಮದುವೆಯಾಗಿದ್ದು, ಪತಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂದು ಮಹಿಳೆ ದೂರಿದ್ದಾಳೆ. ಕಳೆದ ಮಂಗಳವಾರ ಐವರು ನ್ಯಾಯಾಧೀಶರ ಪೀಠ ಸೆ. 377 ಕುರಿತು ವಿಚಾರಣೆ ನಡೆಸಿ, ತೀರ್ಪನ್ನು ಕಾದಿರಿಸಿವೆ. ಆ ಸಂದರ್ಭದಲ್ಲಿ ನ್ಯಾ. ಡಿ. ವೈ. ಚಂದ್ರಚೂಡ ಅವರು ದಂಪತಿ ನಡುವಿನ ಅನೈಸರ್ಗಿಕ ಲೈಂಗಿಕತೆಯನ್ನು ಅಸಹಜ ಎನ್ನಲಾಗದು ಎಂದು ಅಭಿಪ್ರಾಯಪಟ್ಟಿದ್ದರು.

ಮಹಿಳೆಯ ಪತಿ ವೈದ್ಯನಾಗಿದ್ದು, ಸದಾ ಅಸಹಜ ಲೈಂಗಿಕತೆಗೆ ಒತ್ತಾಯಿಸುತ್ತಾರೆ. ಜತೆಗೆ ದೈಹಿಕ ಹಲ್ಲೆ ಕೂಡ ನಡೆಸುತ್ತಾರೆ, ವಿಡಿಯೋ ಚಿತ್ರೀಕರಣ ನಡೆಸುತ್ತಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ