ಆ್ಯಪ್ನಗರ

11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಬರೆದ ಪೋರ!

ಇಲ್ಲೊಬ್ಬ ಅಸಾಮಾನ್ಯ ಹುಡುಗ 11ನೇ ವಯಸ್ಸಿನಲ್ಲೇ 12ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 2 Mar 2017, 4:05 pm
ಹೈದರಾಬಾದ್‌: ಸಾಮಾನ್ಯವಾಗಿ 11ನೇ ವಯಸ್ಸಿನ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಸಾಮಾನ್ಯ ಹುಡುಗ 11ನೇ ವಯಸ್ಸಿನಲ್ಲೇ 12ನೇ ತರಗತಿಯ ಪರೀಕ್ಷೆ ಬರೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.
Vijaya Karnataka Web wonder kid just 11 taking inter final test
11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಬರೆದ ಪೋರ!


ತೆಲಂಗಾಣ ಮೂಲದ ಈ ಪೋರನ ಹೆಸರು ಅಗಸ್ತ್ಯ ಜೈಸ್ವಾಲ್‌. ಸೇಂಟ್‌ ಮೇರಿ ಕಾಲೇಜ್‌ನ ಈ ವಿದ್ಯಾರ್ಥಿ ತನ್ನ 9ನೇ ವಯಸ್ಸಿಗೆ 10ನೇ ತರಗತಿ ಪಾಸ್‌ ಮಾಡಿದ್ದಾನೆ ಎಂದರೆ ನೀವು ನಂಬಲೇಬೇಕು. ಇದರ ನಂತರ 10ನೇ ವಯಸ್ಸಿಗೆ 11ನೇ ತರಗತಿಯಿಂದ ಉತ್ತೀರ್ಣನಾಗಿದ್ದಾನೆ. ಗುರುವಾರ ಜುಬಿಲಿ ಹಿಲ್ಸ್‌ನ ಶ್ರೀ ಚೈತನ್ಯ ಜೂನಿಯರ್‌ ಕಲಾಶಾಲಾದಲ್ಲಿ ನಡೆದ 12ನೇ ತರಗತಿಯ ಪರೀಕ್ಷೆಯನ್ನು ಎದುರಿಸಿದ್ದಾನೆ ಅಗಸ್ತ್ಯ.

ಇನ್ನು ಅಗಸ್ತ್ಯನ ಸಹೋದರಿಯ ಕಥೆ ಕೇಳಿದರೆ ನೀವು ಶಾಕ್‌ ಆಗೋದಂತೂ ಗ್ಯಾರಂಟಿ. ರಾಷ್ಟ್ರೀಯ ಮಟ್ಟದ ಟೆಬಲ್‌ ಟೆನ್ನಿಸ್‌ ಆಟಗಾರ್ತಿಯಾಗಿರುವ ನೈನಾ ಜೈಸ್ವಾಲ್‌, ತನ್ನ 15ನೇ ವಯಸ್ಸಿನಲ್ಲೇ ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾಳೆ. ಸದ್ಯಕ್ಕೆ ನೈನಾಗೆ 16 ವರ್ಷ ವಯಸ್ಸಾಗಿದ್ದು, ಪಿಎಚ್‌ಡಿಗೆ ಸೇರಿಕೊಂಡಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ