ಆ್ಯಪ್ನಗರ

ಮೋದಿಯ ನೋಟು ನಿಷೇಧ ಕ್ರಮ ಮೆಚ್ಚಿದ ವಿಶ್ವ ಬ್ಯಾಂಕ್‌ CEO

ನೋಟು ನಿಷೇಧ ನಡೆಯಿಂದ ದೇಶದ ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಿದೆ ಎಂದು ಕ್ರಿಸ್ಟಾಲಿನಾ ಜಿಯೋರ್‌ ಜಿವಾ ಹೇಳಿದ್ದಾರೆ

ಟೈಮ್ಸ್ ಆಫ್ ಇಂಡಿಯಾ 3 Mar 2017, 6:24 pm
ಹೊಸದಿಲ್ಲಿ: ಕೇಂದ್ರ ಸರಕಾರದ ಅಧಿಕ ನೋಟುಗಳ ಮೇಲಿನ ನಿಷಧ ಕ್ರಮವನ್ನು ಹೊಗಳಿರುವ ವಿಶ್ವ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟಾಲಿನಾ ಜಿಯೋರ್‌ ಜಿವಾ, ಈ ನಡೆಯಿಂದ ದೇಶದ ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ
Vijaya Karnataka Web world bank ceo backs prime minister narendra modis note ban move
ಮೋದಿಯ ನೋಟು ನಿಷೇಧ ಕ್ರಮ ಮೆಚ್ಚಿದ ವಿಶ್ವ ಬ್ಯಾಂಕ್‌ CEO


ಕಳೆದ ವರ್ಷ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ 500-1000 ಮುಖಬೆಲೆಯ ಹಳೆಯ ನೋಟುಗಳ ನಿಷೇಧ ತೀರ್ಮಾನವನ್ನು ಘೋಷಿಸಿದ್ದರು.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಕ್ರಿಸ್ಟಾಲಿನಾ ಅವರು ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮವನ್ನು ಹೊಗಳಿದ್ದು, ಇಂತಹ ದಿಟ್ಟ ನಿರ್ಧಾರದಿಂದ ನೋಟು ಚಲಾವಣೆಯ ಮೆಲೆ ಶೇ.86 ರಷ್ಟು ಹಿಡಿತ ಸಾಧಿಸಿದೆ ಎಂದು ಹೇಳಿದ್ದಾರೆ.

'ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಮಟ್ಟ ಹಾಕಿ ನಗದು ಡಿಜಿಟಲೀಕರಣಕ್ಕೆ ಉಪಯೋಗವಾಗುತ್ತದೆ. ಈ ನಿರ್ಧಾರ ಭಾರತದ ಆರ್ಥಿಕತೆಯ ಮೇಲೆ ಉತ್ತಮ ಧನಾತ್ಮಕ ಪರಿಣಾಮ ಬೀರಲಿದೆ. ಅದೇ ರೀತಿ ಕಪ್ಪು ಹಣದ ವಿರುದ್ಧ ಹೋರಾಟ ನಡೆಸುವ ಇತರೇ ರಾಷ್ಟ್ರಗಳಿಗೂ ಭಾರತದ ಈ ನಡೆ ಒಂದು ಉದಾಹರಣೆಯಾಗಲಿದೆ' ಎಂದು ಕ್ರಿಸ್ಟಾಲಿನಾ ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಅವರು ಭಾರತಕ್ಕೆ ಭೇಟಿ ನೀಡಿದ್ದು, ಎರಡು ದಿನದ ಭೇಟಿಯಲ್ಲಿ ಮುಂಬಯಿ ಹಾಗೂ ಧಾರ್ವಿಗೆ ಲೋಕಲ್‌ ರೈಲಿನಲ್ಲಿ ಪ್ರಯಾಣಿಸಿದ್ದು, ಸಾಮಾನ್ಯ ವರ್ಗದ ದಿನಚರಿಯನ್ನು ಅಧ್ಯಯನ ಮಾಡಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.

ನೋಟು ನಿಷೇಧದ ಬಳಿಕವೂ ದೇಶದ ಜಿಡಿಪಿ ದರ ಸ್ಥಿರತೆಯನ್ನು ಕಾಯ್ದುಗೊಂಡಿದೆ. ಕಳೆದ ವರ್ಷ 7.6ರಷ್ಟಿದ್ದ ಜಿಡಿಪಿ ದರ ಪ್ರಸ್ತುತ 7ರಷ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ