ಆ್ಯಪ್ನಗರ

ಮಹಿಳಾ ಸ್ವಾವಲಂಬನೆಗೆ ನೆರವಾಗಲು ಪ್ರಧಾನಿ ಕರೆ

ದೀಪಾವಳಿ ಸಂದ­ರ್ಭದಲ್ಲಿಲಕ್ಷ್ಮಿ ಪೂಜೆ ಮಾಡುವ ಸಂಪ್ರ­ದಾಯ ನಮ್ಮಲ್ಲಿದೆ. ಇಂತಹ ದಿನದಂದು ತಮ್ಮ ಸಾಧನೆಯ ಮೂಲಕ ಬೇರೆಯವ­ರಿಗೆ ಪ್ರೇರಕ ಶಕ್ತಿಯಾಗಿರುವ ನಿಮ್ಮ ನೆರೆ­ಹೊರೆಯ ಸಾಧಕ ಹೆಣ್ಣು ಮಕ್ಕಳನ್ನು ಗುರುತಿಸಿ ಸನ್ಮಾನಿಸಿ,'' ಎಂದು ಮತ್ತೊಮ್ಮೆ ಕರೆ ನೀಡಿದರು.

PTI 9 Oct 2019, 5:00 am
ಹೊಸದಿಲ್ಲಿ: ಮಹಿಳೆಯರ ಸ್ವಾವಲಂಬನೆ ಮತ್ತು ಅಭಿವೃದ್ಧಿಗೆ ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ದಿಲ್ಲಿಯಲ್ಲಿದ್ವಾರಕಾ ಶ್ರೀರಾಮ ಲೀಲಾ ಸೊಸೈಟಿ ಆಯೋಜಿಸಿದ್ದ ವಿಜಯ ದಶಮಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸರಕಾರದ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಶಾಲಿ­ಗೊಳಿಸುವಲ್ಲಿಜನತೆಯ ಸಹಕಾರ ಅಗತ್ಯ. ದುರ್ಗಾ ಮಾತೆಯ ಶಕ್ತಿಯ ಸ್ಫೂರ್ತಿಯೊಂದಿಗೆ ಮಹಿಳೆಯರ ಸ್ವಾಭಿಮಾನ ಹಾಗೂ ಘನತೆಯನ್ನು ಹೆಚ್ಚಿಸೋಣ ಎಂದು ಹೇಳಿದರು. ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಭಾಗವಾಗಿ ಒಂದು ಬಾರಿಯ ಪ್ಲಾಸ್ಟಿಕ್‌ ಬಳಕೆ ತ್ಯಜಿಸುವಂತೆ ಜನತೆಗೆ ಕರೆ ನೀಡಿದರು. ಇಂಧನ, ಆಹಾರ ಹಾಗೂ ಜಲ ಸಂರಕ್ಷಣೆಗೆ ಮುಂದಾಗೋಣ ಎಂದರು. ಭಾರತ್‌ ಕಿ ಲಕ್ಷ್ಮಿ: ''ಭಾರತ ಹಬ್ಬಗಳ ತವರು. ನವರಾತ್ರಿ ಮುಗಿಯುತ್ತಿದ್ದಂತೆ ದೀಪಾವಳಿ ಬರಲಿದೆ. ದೀಪಾವಳಿ ಸಂದ­ರ್ಭದಲ್ಲಿಲಕ್ಷ್ಮಿ ಪೂಜೆ ಮಾಡುವ ಸಂಪ್ರ­ದಾಯ ನಮ್ಮಲ್ಲಿದೆ. ಇಂತಹ ದಿನದಂದು ತಮ್ಮ ಸಾಧನೆಯ ಮೂಲಕ ಬೇರೆಯವ­ರಿಗೆ ಪ್ರೇರಕ ಶಕ್ತಿಯಾಗಿರುವ ನಿಮ್ಮ ನೆರೆ­ಹೊರೆಯ ಸಾಧಕ ಹೆಣ್ಣು ಮಕ್ಕಳನ್ನು ಗುರುತಿಸಿ ಸನ್ಮಾನಿಸಿ,'' ಎಂದು ಮತ್ತೊಮ್ಮೆ ಕರೆ ನೀಡಿದರು. ತಮ್ಮ ಮನ್‌ ಕಿ ಬಾತ್‌ ರೇಡಿಯೊ ಭಾಷಣದಲ್ಲಿಯೂ ಮೋದಿ ಅವರು 'ಭಾರತ್‌ ಕಿ ಲಕ್ಷ್ಮಿ' ಎಂಬ ಪದ ಪ್ರಯೋಗದ ಮೂಲಕ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
Vijaya Karnataka Web modi-PTI

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ