ಆ್ಯಪ್ನಗರ

ರಮಣಿ ಟ್ವೀಟ್‌ ದುರುದ್ದೇಶದಿಂದ ಕೂಡಿತ್ತು ಎಂದ ಎಂ.ಜೆ.ಅಕ್ಬರ್‌

ಪ್ರಿಯಾ ರಮಣಿ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ದಿಲ್ಲಿ ಹೆಚ್ಚುವರಿ ಚೀಫ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಪಾಟೀಸವಾಲಿನ ವೇಳೆ ಅಕ್ಬರ್‌, ''ಪ್ರಿಯಾ ರಮಣಿ ಅವರು ನನ್ನ ವಿರುದ್ಧ ಮಾಡಿರುವ ಟ್ವೀಟ್‌ಗಳು ಹಾಗೂ ಬರೆದಿರುವ ಲೇಖನಗಳು ವಾಸ್ತವಕ್ಕೆ ದೂರವಾಗಿವೆ,'' ಎಂದು ಹೇಳಿದರು.

PTI 7 Jul 2019, 5:00 am
ಹೊಸದಿಲ್ಲಿ: ಮಿ ಟೂ ಅಭಿಯಾನದ ಸಂದರ್ಭದಲ್ಲಿ ತಮ್ಮ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಮಾಡಿದ್ದ ಟ್ವೀಟ್‌ಗಳು ದುರುದ್ದೇಶದಿಂದ ಕೂಡಿದ್ದವೇ ಹೊರತು ಅದರಲ್ಲಿ ಲೈಂಗಿಕ ಕಿರುಕುಳದ ಕುರಿತ ಜನಜಾಗೃತಿಯ ಉದ್ದೇಶ ಇರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ದಿಲ್ಲಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಿಯಾ ರಮಣಿ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ದಿಲ್ಲಿ ಹೆಚ್ಚುವರಿ ಚೀಫ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಪಾಟೀಸವಾಲಿನ ವೇಳೆ ಅಕ್ಬರ್‌, ''ಪ್ರಿಯಾ ರಮಣಿ ಅವರು ನನ್ನ ವಿರುದ್ಧ ಮಾಡಿರುವ ಟ್ವೀಟ್‌ಗಳು ಹಾಗೂ ಬರೆದಿರುವ ಲೇಖನಗಳು ವಾಸ್ತವಕ್ಕೆ ದೂರವಾಗಿವೆ,'' ಎಂದು ಹೇಳಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜುಲೈ 15ಕ್ಕೆ ಮುಂದೂಡಿದೆ. ಅಕ್ಬರ್‌ ಅವರು ಇಂಗ್ಲೀಷ್‌ ಪತ್ರಿಕೆಯೊಂದರ ಸಂಪಾದಕರಾಗಿದ್ದ ವೇಳೆ, ತಾವು ಅಲ್ಲಿ ಕಾರ್ಯನಿರ್ವಹಿಸುತ್ತಿದ್ಧಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಿಯಾ ರಮಣಿ ಆರೋಪಿಸಿದ್ದರು. ರಮಣಿ ಆರೋಪದ ಬಳಿಕ ಅಕ್ಬರ್‌ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಯ ಕಾವಿಗೆ ಮಣಿದು ಕೊನೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Vijaya Karnataka Web akbar

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ