ಆ್ಯಪ್ನಗರ

ಯಮುನೆಯಲ್ಲಿ ಹರಿದ ವಿಷ ತ್ಯಾಜ್ಯ: ಮಥುರೆಯಲ್ಲಿ ಮೀನುಗಳ ಸಾವು

ನಗರದ ಯಮುನಾ ಘಾಟ್‌ನಲ್ಲಿ ಸತ್ತ ಮೀನುಗಳು ರಾಶಿರಾಶಿಯಾಗಿ ಪತ್ತೆಯಾಗಿವೆ.

Vijaya Karnataka 5 Nov 2018, 10:32 am
ಮಥುರಾ: ನಗರದ ಯಮುನಾ ಘಾಟ್‌ನಲ್ಲಿ ಸತ್ತ ಮೀನುಗಳು ರಾಶಿರಾಶಿಯಾಗಿ ಪತ್ತೆಯಾಗಿವೆ. ನದಿಗೆ ವಿಷಕಾರಿ ತ್ಯಾಜ್ಯಗಳನ್ನು ಬಿಟ್ಟು ನೀರು ಮಲಿನಗೊಳಿಸಿದ್ದರಿಂದ ಈ ಸಾವು ಸಂಭವಿಸಿರಬಹುದು ಎಂದು ಪರಿಸರ ಹೋರಾಟಗಾರರು, ಸ್ಥಳೀಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web Dead Fish


ನವೆಂಬರ್‌ 9ರಂದು ನಡೆಯುವ ಯಾಮ್‌ ದ್ವಿತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾವಿರಾರು ಭಕ್ತರು ಪುಣ್ಯ ಸ್ನಾನಕ್ಕೆ ಆಗಮಿಸಲಿದ್ದಾರೆ. ಅದಕ್ಕೆ ಮುನ್ನ ಘಾಟ್‌ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಮಲಿನವಾಗಿರುವುದು ಆತಂಕ ಮೂಡಿಸಿದೆ.

ಹರಿಯಾಣದಿಂದ ಚರಂಡಿ ಮತ್ತು ಕಾಲುವೆಗಳ ಮೂಲಕ ವಿಷಕಾರಿ ತ್ಯಾಜ್ಯ ಹರಿದು ಬಂದು ಯಮುನೆ ಸೇರಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಈ ಕಾರಣಕ್ಕಾಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹರಿಯಾಣದ ಸಹವರ್ತಿ ಜತೆ ಮಾತುಕತೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ