ಆ್ಯಪ್ನಗರ

ಅಯೋಧ್ಯೆ ತಲುಪಿದ ಬಾಬಾ ರಾಮ್‌ದೇವ್: ಯೋಗ ಗುರುವಿಗೆ ಅದ್ದೂರಿ ಸ್ವಾಗತ!

ನಾಳಿನ(ಬುಧವಾರ) ರಾಮ ಜನ್ಮಭೂಮಿ ಭೂಮಿ ಫೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗ ಗುರು ಹಾಗೂ ಪತಂಜಲಿ ಮುಖ್ಯಸ್ಥ ಬಾಬಾ ರಾಮ್‌ದೇವ್ ಅಯೋಧ್ಯೆ ತಲುಪಿದ್ದು, ಬಾಬಾ ರಾಮ್‌ದೇವ್ ಅವರಿಗೆ ಅಯೋಧ್ಯೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ.

Vijaya Karnataka Web 4 Aug 2020, 3:36 pm
ಅಯೋಧ್ಯೆ: ನಾಳೆ(ಬುಧವಾರ) ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಪ್ರಧಾನಿ ಮೋದಿ ಅವರಿಂದ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಲಿದ್ದು, ಭೂಮಿ ಪೂಜೆಗೆ ಅಯೋಧ್ಯೆ ಸಜ್ಜಾಗಿದೆ.
Vijaya Karnataka Web Baba Ramdev
ಬಾಬಾ ರಾಮ್‌ದೇವ್


ಈಗಾಗಲೇ 175 ಗಣ್ಯ ವ್ಯಕ್ತಿಗಳಿಗೆ ಆಮಂತ್ರಣ ಪತ್ರಿಕೆ ತಲುಪಿದ್ದು, ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

25 ಸಾವಿರ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಮೊಹ್ಮದ್ ಶರೀಫ್‌ ಕೈ ತಲುಪಿದ ಅಯೋಧ್ಯೆ ಆಮಂತ್ರಣ ಪತ್ರಿಕೆ!

ಈ ಮಧ್ಯೆ ಯೋಗ ಗುರು ಹಾಗೂ ಪತಂಜಲಿ ಮುಖ್ಯಸ್ಥ ಬಾಬಾ ರಾಮ್‌ದೇವ್ ಅಯೋಧ್ಯೆ ತಲುಪಿದ್ದು, ಬಾಬಾ ರಾಮ್‌ದೇವ್ ಅವರಿಗೆ ಅಯೋಧ್ಯೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಗಿದೆ.


ಭೂಮಿ ಪೂಜೆ ಆಮಂತ್ರಿತರಲ್ಲಿ ಬಾಬಾ ರಾಮ್‌ದೇವ್ ಕೂಡ ಒಬ್ಬರಾಗಿದ್ದು, ಅದರಂತೆ ಭೂಮಿ ಪೂಜೆಗೂ ಒಂದು ದಿನ ಮೊದಲೇ ಅವರು ಅಯೋಧ್ಯೆ ತಲುಪಿದ್ದಾರೆ.

ಭೂಮಿ ಪೂಜೆ ಮೊದಲ ಆಮಂತ್ರಣ ಪತ್ರಿಕೆ ಸೇರಿದ್ದು ಇಕ್ಬಾಲ್ ಅನ್ಸಾರಿ ಕೈಗೆ: ಯಾರಿವರು?

ಅಯೋಧ್ಯೆ ತಲುಪಿದ ಬಾಬಾ ರಾಮ್‌ದೇವ್ ಅವರಿಗೆ ರಾಮ ಜನ್ಮಭೂಮಿ ಟ್ರಸ್ಟ್ ಹಾಗೂ ಅವರ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆತಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದು ಅತೀವ ಸಂತಸ ತಂದಿದೆ ಎಂದು ಬಾಬಾ ರಾಮ್‌ದೇವ್ ಈ ವೇಳೇ ನುಡಿದರು.

ಅಯೋಧ್ಯೆ ಭೂಮಿ ಪೂಜೆಗೆ ಒಟ್ಟು 175 ವಿಶೇಷ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದ್ದು,ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಅನುಸಾರವಾಗಿಯೇ ಭೂಮಿ ಪೂಜೆ ನೆರವೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ