ಆ್ಯಪ್ನಗರ

ಒಗ್ಗಟ್ಟು ಪ್ರದರ್ಶನ: ಪ್ರಿಯಾಂಕಾ ಗಾಂಧಿ ಮನವಿ ಪುರಸ್ಕರಿಸಿದ ಯೋಗಿ ಸರ್ಕಾರ!

ವಲಸೆ ಕಾರ್ಮಿಕರಿಗಾಗಿ 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿಕೊಂಡಿದ್ದ ಮನವಿಯನ್ನು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುರಸ್ಕರಿಸಿದ್ದಾರೆ.

Vijaya Karnataka Web 18 May 2020, 11:41 pm
ಲಕ್ನೋ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಅದರಂತೆ ಇಡೀ ದೇಶವೇ ಒಂದಾಗಿ ಮಾರಕ ವೈರಾಣುವಿನ ವಿರುದ್ಧ ಹೋರಾಟ ನಡೆಸುತ್ತಿದೆ.
Vijaya Karnataka Web yogi
ಸಂಗ್ರಹ ಚಿತ್ರ


ಕೊರೊನಾ ವಬೈರಸ್ ಹಾವಳಿಯ ಸಂದರ್ಭದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಾಗಿ ದೇಶವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ದುಡಿಯಬೇಕು ಎಂದೂ ಪ್ರಧಾನಿ ಮೋದಿ ಕರೆ ನೀಡಿದ್ದರು. ಅದರಂತೆ ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ರಾಜಕೀಯ ಪಕ್ಷಗಳು ಈ ಸಂದರ್ಭದಲ್ಲಿ ಭಿನ್ನರಾಗ ಎಳೆದಿರುವುದು ಕಡಿಮೆ.

ಇನ್ನು ಪ್ರಧಾನಿ ಮೋದಿ ಅವರ ಒಗ್ಗಟ್ಟು ಪ್ರದರ್ಶನದ ಕರೆಯನ್ನು ಸ್ವೀಕರಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮನವಿಯೊಂದನ್ನು ಪುರಸ್ಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಉ. ಪ್ರದೇಶ ರಸ್ತೆ ಅಪಘಾತಕ್ಕೆ ಸರಕಾರವೇ ಹೊಣೆ: ಪ್ರಿಯಾಂಕಾ ಗಾಂಧಿ


ಹೌದು, ವಲಸೆ ಕಾರ್ಮಿಕರಿಗಾಗಿ 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಮನವಿಯನ್ನು ಪುರಸ್ಕರಿಸಿರುವ ಯೋಗಿ ಸರ್ಕಾರ, ಬಸ್ಸುಗಳ ನಂಬರ್, ಚಾಲಕರ ಹೆಸರುಗಳ ಪಟ್ಟಿ ಕೊಡುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಕೋರಿದೆ. ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸುವ ಮನವಿಯನ್ನು ಪುರಸ್ಕರಿಸಿರುವುದಾಗಿ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.



ಯೋಗಿ ಆದಿತ್ಯನಾಥ್‌ಗೆ ಪ್ರಿಯಾಂಕ ಗಾಂಧಿ ಬರೆದಿರುವ ಪತ್ರದಲ್ಲಿರುವ ಪ್ರಮುಖ ಅಂಶಗಳಿವು!

ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಮೂಲಕ ಯೋಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಇದಕ್ಕಾಗಿ ಬಾಡಿಗೆ ಪಡೆದಿರುವ ಬಸ್ಸುಗಳ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ