ಆ್ಯಪ್ನಗರ

ದಿವ್ಯಾಂಗರ ಸಾಲಮನ್ನಾಗೆ ಮುಂದಾದ ಯೋಗಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ದಿವ್ಯಾಂಗರ ಸಾಲಮನ್ನಾ ಮಾಡಲು ಮುಂದಾಗಿದೆ.

ಟೈಮ್ಸ್ ಆಫ್ ಇಂಡಿಯಾ 15 Jun 2017, 1:32 pm
ಲಖನೌ: ಮೊನ್ನೆಯಷ್ಟೇ ರೈತರ ಬೆಳೆ ಸಾಲಮನ್ನಾ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ದಿವ್ಯಾಂಗರ ಸಾಲಮನ್ನಾ ಮಾಡಲು ಮುಂದಾಗಿದೆ.
Vijaya Karnataka Web yogi adityanath mulls loan waiver for physically challenged
ದಿವ್ಯಾಂಗರ ಸಾಲಮನ್ನಾಗೆ ಮುಂದಾದ ಯೋಗಿ


ಉತ್ತರ ಪ್ರದೇಶ ಸರಕಾರದ ದಿವ್ಯಾಂಗಜನ್ ಸಶಕ್ತೀಕರಣ ಯೋಜನೆಯಡಿ ದಿವ್ಯಾಂಗರ 3.88 ಕೋಟಿ ರೂಪಾಯಿ ಸಾಲಮನ್ನಾ ಮಾಡಲು ನಿರ್ಧರಿಸಿದೆ. ಮುಂದಿನ 100 ದಿನಗಳಲ್ಲಿ 6,821 ದಿವ್ಯಾಂಗರ ಒಟ್ಟು 3.88 ರೂಪಾಯಿ ಸಾಲ ಮನ್ನಾ ಮಾಡಲು ದಿವ್ಯಾಂಗಜನ್ ಸಶಕ್ತೀಕರಣ ಇಲಾಖೆ ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೂ 1.60 ಕೋಟಿ ರೂಪಾಯಿ ಸಾಲವನ್ನು ಪಾವತಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೈತರ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ದಿವ್ಯಾಂಗರ ಸಾಲಮನ್ನಾ ಮಾಡುತ್ತೇವೆ ಎಂದು ದಿವ್ಯಾಂಗರ ಕ್ಷೇಮಾಭಿವೃದ್ಧಿ
ಖಾತೆ ಸಚಿವ ಓಂ ಪ್ರಕಾಶ ರಾಜ್‌ಭಾರ್ ಅವರು ಘೋಷಿಸಿದ್ದಾರೆ.

ಪ್ರಸ್ತುತ ಉತ್ತರ ಪ್ರದೇಶದಲ್ಲಿ ಸುಮಾರು 2 ಕೋಟಿ ಜನ ದಿವ್ಯಾಂಗರಿದ್ದಾರೆ. ದಿವ್ಯಾಂಗರನ್ನು ಸ್ವಾವಲಂಬಿಗಳಾಗಿ ಮಾಡಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ. ಕೇಂದ್ರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಶನ್‌ ಜತೆ ದಿವ್ಯಾಂಗರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇವೆ. ತಮ್ಮ ಕುಟೀರಗಳಲ್ಲಿಯೇ ಸಣ್ಣ ಕೈಗಾರಿಕೆ ಆರಂಭಿಸಲು ಪ್ರೋತ್ಸಾಹ ನೀಡುತ್ತೇವೆ' ಎಂದು ಓಂ ಪ್ರಕಾಶ ರಾಜ್‌ಭಾರ್ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ