ಆ್ಯಪ್ನಗರ

ಯೋಗಿ, ಅಖಿಲೇಶ್‌ಗೆ ನವರಾತ್ರಿ ಉಪವಾಸ, ಮುಂದುವರಿದ ರಾಹುಲ್ ಟೆಂಪಲ್ ರನ್

ಧರ್ಮನಿಷ್ಠ, ಗೋರಖ್‌ಧಾಮ ಪೀಠಾಧಿಪತಿ ಯೋಗಿ, ನವರಾತ್ರಿಯ 9 ದಿನ ಕೂಡ ಉಪವಾಸವಿರುವುದಷ್ಟೇ ಅಲ್ಲ, ಇತರ ವಿಧಿವಿಧಾನಗಳನ್ನು ಸಹ ಚಾಚುತಪ್ಪದೆ ಆಚರಿಸುತ್ತಾರೆ.

TIMESOFINDIA.COM 11 Oct 2018, 3:39 pm
ಲಖನೌ: ಇತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಠಿಣ ನವರಾತ್ರಿ ಉಪವಾಸದಲ್ಲಿದ್ದಾರೆ. ಅತ್ತ ರಾಹುಲ್ ಗಾಂಧಿ ತಮ್ಮ ಟೆಂಪಲ್ ರನ್ ಮುಂದುವರೆಸಿದ್ದು, ಅವರು ಉಪವಾಸದಲ್ಲಿದ್ದಾರೋ, ಅಥವಾ ಇಲ್ಲವೋ ಎಂಬುದು ತಿಳಿದುಬಂದಿಲ್ಲ.
Vijaya Karnataka Web Yogi A


ಧರ್ಮನಿಷ್ಠ, ಗೋರಖ್‌ಧಾಮ ಪೀಠಾಧಿಪತಿ ಯೋಗಿ, ನವರಾತ್ರಿಯ 9 ದಿನ ಕೂಡ ಉಪವಾಸವಿರುವುದಷ್ಟೇ ಅಲ್ಲ, ಇತರ ವಿಧಿಗಳನನ್ನು ಸಹ ಚಾಚುತಪ್ಪದೆ ಆಚರಿಸುತ್ತಾರೆ.

ಉತ್ತರ ಪ್ರದೇಶ ರಾಜಕಾರಣದ ಮೂರನೇ ಅತಿ ಮುಖ್ಯ ಆಟಗಾರರಾಗಿರುವ ಮಾಯಾವತಿ ಹಿಂದೂ ಧರ್ಮದ ಹಬ್ಬಗಳಾಚರಣೆಯಿಂದ ಸದಾ ದೂರವಾಗಿರುತ್ತಾರೆ. ಬೌದ್ಧರ್ಮವನ್ನು ಅನುಸರಿಸುತ್ತಿರುವ ಅವರು ಹೋಳಿ, ದೀಪಾವಳಿ ಆಚರಿಸುವುದು ಕೂಡ ಒಮ್ಮೆಯೂ ಕಂಡು ಬಂದಿಲ್ಲ.

ಮುಸ್ಲಿಂ ಪರ ನಾಯಕ ಎಂದೇ ಬಿಂಬಿತರಾಗಿರುವ ಅಖಿಲೇಶ್ ಹದಿಹರೆಯದಿಂದಲೇ ನವರಾತ್ರಿ ಉಪವಾಸವನ್ನು ಆಚರಿಸಿಕೊಂಡು ಬಂದಿರುವುದು ಗಮನಿಸತಕ್ಕ ವಿಚಾರ. ಅವರು ದೇವಸ್ಥಾಂಗಳಿಗೆ ಭೇಟಿ ನೀಡುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಡಿಮೆ.

ಇನ್ನು ಇತ್ತೀಚಿಗೆ ಮಾನಸ ಸರೋವರ ಯಾತ್ರೆಯ ಮೂಲಕ ಸುದ್ದಿಯಲ್ಲಿದ್ದ ರಾಹುಲ್ ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನದಲ್ಲಿ ದೇವಸ್ಥಾನ ಸುತ್ತುತ್ತಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ ರಾಹುಲ್ ಮೃದು ಹಿಂದುತ್ವದ ಕಾರ್ಡ್ ಆಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ