ಆ್ಯಪ್ನಗರ

ಟಾಪ್ ಟೆನ್ ರ‍್ಯಾಂಕ್ ವಿದ್ಯಾರ್ಥಿಗಳ ಗ್ರಾಮಕ್ಕೆ ರಸ್ತೆ ಯೋಗ(ಗಿ)

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಸೆಳೆಯಲು ಮುಂದಾಗಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ, ಹತ್ತು ಹಾಗೂ 12ನೇ ತರಗತಿಯಲ್ಲಿ ಟಾಪ್ ಟೆನ್ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಮುಂದಾಗಿದೆ.

TIMESOFINDIA.COM 14 Jul 2018, 12:47 pm
ಲಖನೌ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಮೂಹವನ್ನು ಸೆಳೆಯಲು ಮುಂದಾಗಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ, ಹತ್ತು ಹಾಗೂ 12ನೇ ತರಗತಿಯಲ್ಲಿ ಟಾಪ್ ಟೆನ್ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಮುಂದಾಗಿದೆ.
Vijaya Karnataka Web Yogi


ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸರಕಾರ 2012ರಲ್ಲಿ ಘೋಷಿಸಿದ್ದ ಲ್ಯಾಪ್‌ಟಾಪ್ ಭಾಗ್ಯಕ್ಕೆ ಪ್ರತಿಯಾಗಿ ಬಿಜೆಪಿ ಈ ಮಹತ್ವದ ಯೋಜನೆ ರೂಪಿಸಿದೆ.

ಯೋಜನೆಯ ಆರಂಭದಲ್ಲಿ ಸರ್ಕಾರ 1.22 ಕೋಟಿ ರೂಪಾಯಿ ಮಂಜೂರು ಮಾಡುತ್ತಿದೆ. 10ನೇ ತರಗತಿಯಲ್ಲಿ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳ ಪೈಕಿ ಒಬ್ಬರಾದ ಅಭಿಷೇಕ್ ಗುಪ್ತಾ ಅವರ ಗ್ರಾಮದಿಂದ ಬಂದಾ-ಬಹ್ರೈಚ್ ಹೆದ್ದಾರಿ ಸಂಪರ್ಕಿಸಲು 700 ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ 50 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. 12ನೇ ತರಗತಿಯಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದ ರಿಶಿಕಾ ಅವರ ಖೊಜನ್ಪುರ್ ಗ್ರಾಮ ಸಂಪರ್ಕಿಸಲು 1 ಕಿ.ಮೀ. ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಈ ಯೋಜನೆಗೆ 72.43 ಲಕ್ಷ ರೂಪಾಯಿ ತಗುಲಲಿದೆ ಎಂದು ಯೋಗಿ ಸರ್ಕಾರದ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಯೋಜನೆ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳ್ಳಲಿದ್ದು, ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಲಿದೆ. ಈ ರಸ್ತೆಗಳು ಪಿಡಬ್ಲ್ಯೂಡಿ ರಾಜ್ಯ ಹೆದ್ದಾರಿ ಯೋಜನೆಯಲ್ಲಿ ಸೇರ್ಪಡೆಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ