ಸೂರತ್: ಮೋದಿ ರಾಖಿ, ಮಗ್, ಟೀ ಶರ್ಟ್ ನೋಡಿರುತ್ತೀರ. ಮತ್ತೀಗ ಸೀರೆಗಳ ಸರದಿ. ಚುನಾವಣೆ ಸಮೀಪಿಸುತ್ತಿದ್ದಂತೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಚಿತ್ರ ಅಚ್ಚು ಹಾಕಿಸಿ ಅವರಿಗಾಗಿ ಮತ ಕೇಳುವ ಟ್ರೆಂಡ್ ಮಧ್ಯೆ ಅವರ ಚಿತ್ರವುಳ್ಳ ಕಲರ್ಫುಲ್ ಸೀರೆಗಳೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಪ್ರಧಾನಿ ಮೋದಿ ತವರೂರು ಗುಜರಾತಿನಲ್ಲೀಗ ಅವರ ಮುಖವಿರುವ ಸೀರೆಗಳ ಟ್ರೆಂಡ್ ಶುರುವಾಗಿದ್ದು ಹಾಟ್ ಕೇಕ್ನಂತೆ ಮಾರಾಟವಾಗುತ್ತಿವೆ.
ಗುಜರಾತ್ನ ಬಟ್ಟೆ ವ್ಯಾಪಾರಿಗಳಲೊಬ್ಬರಾದ ರೋನಕ್ ಶಾ ಹೇಳುವ ಪ್ರಕಾರ 3, 4 ವಿನ್ಯಾಸದಲ್ಲಿ ಡಿಜಿಟಲ್ ಪ್ರಿಂಟ್ ಮಾಡಲಾದ ಮೋದಿ ಸೀರೆಗಳು ಲಭ್ಯವಿದ್ದುಈ ಸೀರೆಗಳಿಗೆ ವ್ಯಾಪಕ ಬೇಡಿಕೆ ಬರುತ್ತಿದೆ. ,ಮೋದಿ ಅಭಿಮಾನಿಗಳು ಅಂಗಡಿಗಳಿಗೆ ಧಾವಿಸಿ ತಮಗಿಷ್ಟವಾಗ ಮೋದಿ ಸೀರೆ ಖರೀದಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬೇರೆ ಬೇರೆ ನಾಯಕರ ಚಿತ್ರ ಉಳ್ಳ ಸೀರೆಗಳು ಬರಬಹುದು ಎಂದವರು ಹೇಳಿದ್ದಾರೆ.
ಮೋದಿ ಸೀರೆ ಖರೀದಿಸಲು ಧಾವಿಸಿ ಬರುತ್ತಿರುವ ಮಹಿಳೆಯರು, ಸಂಪೂರ್ಣ ದೇಶವೇ ಅಭಿಮಾನ ಪಡುವಂತಹ ಮೋದಿ ಸೀರೆ ಉಡಲು ನಮಗೂ ಹೆಮ್ಮೆ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ.