ಆ್ಯಪ್ನಗರ

'ನೀವು ಲೋಕಸಭೆಯಲ್ಲಿ ಕೆಲಸ ಮಾಡುತ್ತೀರಿ': ಪ್ರಧಾನಿ ಮೋದಿ ಪ್ರಶ್ನೆಗೆ 5 ವರ್ಷದ ಪುಟಾಣಿ ಕೊಟ್ಟ ಉತ್ತರ ನೋಡಿ

PM Narendra Modi: ಮಧ್ಯಪ್ರದೇಶದ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರ ಐದು ವರ್ಷದ ಮಗಳ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂಭಾಷಣೆ ಗಮನ ಸೆಳೆದಿದೆ. ನಾನು ಏನು ಮಾಡುತ್ತೇನೆ ಎನ್ನುವುದು ಗೊತ್ತೇ? ಎಂಬ ಪ್ರಶ್ನೆಗೆ, ಲೋಕಸಭೆಯಲ್ಲಿ ಕೆಲಸ ಮಾಡುತ್ತೀರಿ ಎಂದು ಬಾಲಕಿ ಹೇಳಿದ್ದಾಳೆ.

Edited byಅಮಿತ್ ಎಂ.ಎಸ್ | Vijaya Karnataka Web 28 Jul 2022, 11:27 am

ಹೈಲೈಟ್ಸ್‌:

  • ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಮಗಳ ಜತೆ ಪ್ರಧಾನಿ ಸಂಭಾಷಣೆ
  • ಐದು ವರ್ಷದ ಬಾಲಕಿ ನೀಡಿದ ಉತ್ತರ ಕೇಳಿ ಎಲ್ಲರಲ್ಲಿಯೂ ನಗು
  • ನೀವು ದಿನವೂ ಟಿವಿಯಲ್ಲಿ ಬರ್ತೀರಿ ಎಂದು ಪ್ರಧಾನಿಗೆ ಹೇಳಿದ ಬಾಲಕಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web modi child fb

ಹೊಸದಿಲ್ಲಿ: ಬಿಜೆಪಿ ಸಂಸದರೊಬ್ಬರ ಐದು ವರ್ಷದ ಪುಟಾಣಿ ಮಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಕತೆಯ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಉಜ್ಜಯನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರು ತಮ್ಮ ಕುಟುಂಬದ ಜತೆ ಸಂಸತ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮಗುವಿನ ಮುಗ್ಧ ಮಾತಿಗೆ ಪ್ರಧಾನಿ ಮೋದಿ ಖುಷಿಯಿಂದ ಜೋರಾಗಿ ನಕ್ಕರು.
ಪ್ರಧಾನಿ ಮೋದಿ ಮತ್ತು ಐದು ವರ್ಷದ ಪುಟಾಣಿ ಅಹನಾ ಫಿರೋಜಿಯಾ ನಡುವಿನ ಮಾತುಕತೆ ಸ್ವಾರಸ್ಯಕರವಾಗಿತ್ತು. "ನಿನಗೆ ನಾನು ಯಾರೆಂದು ಗೊತ್ತೇ?" ಎಂದು ಮಗುವನ್ನು ಮೋದಿ ಪ್ರಶ್ನಿಸಿದರು. ಅದಕ್ಕೆ ಆಕೆ, "ಹೌದು, ನೀವು ಮೋದಿಜಿ. ನೀವು ಪ್ರತಿದಿನವೂ ಟಿವಿಯಲ್ಲಿ ಬರ್ತೀರಿ" ಎಂದು ಹೇಳಿದ್ದಾಳೆ.
ಬಿಜೆಪಿಯೇತರ ರಾಜ್ಯಗಳಿಂದ ಪಾಠ ಕಲಿಯಿರಿ: ಸ್ವಪಕ್ಷದ ಮುಖ್ಯಮಂತ್ರಿಗಳಿಗೆ ನರೇಂದ್ರ ಮೋದಿ ಕಿವಿಮಾತು

"ನಾನು ಏನು ಮಾಡುತ್ತೇನೆ ಎಂದು ನಿನಗೆ ಗೊತ್ತೇ?" ಎಂದು ಪ್ರಧಾನಿ ಮತ್ತೆ ಕೇಳಿದ್ದಾರೆ. "ನೀವು ಲೋಕಸಭೆಯಲ್ಲಿ ಕೆಲಸ ಮಾಡುತ್ತಿದ್ದೀರಿ" ಎಂದು ಅವಳು ಉತ್ತರಿಸಿದ್ದಾಳೆ.


ಇದನ್ನು ಕೇಳಿದ ಕೂಡಲೇ ಕೊಠಡಿಯಲ್ಲಿದ್ದ ಪ್ರತಿಯೊಬ್ಬರೂ ಜೋರಾಗಿ ನಕ್ಕಿದ್ದಾರೆ. ಮೋದಿ ಕೂಡ ಮಗುವಿನ ಮುಗ್ಧ ಮಾತುಗಳನ್ನು ಆನಂದಿಸಿದ್ದಾರೆ. ಮಗು ಕೊಠಡಿಯಿಂದ ಹೊರಗೆ ಹೋಗುವುದಕ್ಕೂ ಮುನ್ನ ಪ್ರಧಾನಿ ಮೋದಿ ಅವಳಿಗೆ ಚಾಕೊಲೇಟ್ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಈ ಹಿಂದೆಯೂ ಸಂಸದರ ಮಕ್ಕಳ ಜತೆ ತಮಾಷೆಯಾಗಿ ಹರಟಿದ್ದರು.
ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ ಕೆಲವೇ ದಿನಗಳಲ್ಲಿ ಕಿತ್ತುಹೋದ ಬುಂಡೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ

ಅಹನಾಳ ತಂದೆ ಅನಿಲ್ ಫಿರೋಜಿಯಾ ಅವರು ಕೆಲವು ತಿಂಗಳ ಹಿಂದೆ ಸಾಕಷ್ಟು ಸುದ್ದಿಯಲ್ಲಿದ್ದರು. ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ನೀಡಿದ್ದ ಸವಾಲನ್ನು ಸ್ವೀಕರಿಸಿ ಅವರು ತೂಕ ಇಳಿಸಲು ಮಾಡಿದ್ದ ಪ್ರಯತ್ನ ಶ್ಲಾಘನೆಗೆ ಒಳಗಾಗಿತ್ತು.

ಸಮಾರಂಭವೊಂದರಲ್ಲಿ ನಿತಿನ್ ಗಡ್ಕರಿ ಅವರಿಗೆ ಸಂಸದ ಅನಿಲ್ ಅವರು, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು. ಅನಿಲ್ ಅವರು ಇಳಿಸುವ ಪ್ರತಿ ಒಂದು ಕೆಜಿ ತೂಕಕ್ಕೆ ಒಂದು ಸಾವಿರ ಕೋಟಿ ರೂ ಅನುದಾನ ಮಂಜೂರು ಮಾಡಿಸಿಕೊಡುವುದಾಗಿ ಗಡ್ಕರಿ ಭರವಸೆ ನೀಡಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡಿದ್ದ ಅನಿಲ್ ಅವರು 21 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹೀಗಾಗಿ 21,000 ಕೋಟಿ ರೂ ಅನುದಾನ ಅವರ ಕ್ಷೇತ್ರಕ್ಕೆ ಸಿಗಬೇಕಿದೆ.
ಪ್ರಧಾನಿ ಮೋದಿ ಸಮ್ಮುಖದಲ್ಲಿ ಭಾಷಣದ ವೇಳೆ ತಡವರಿಸಿದ ತೇಜಸ್ವಿ ಯಾದವ್: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

ಪ್ರಧಾನಿ ಮೋದಿ ಕೂಡ ಸಂಸದ ಅನಿಲ್ ಅವರ ದೇಹ ತೂಕ ಇಳಿಸುವ ಕುರಿತು ಮಾತನಾಡಿದ್ದರು. ಅವರ ಪ್ರಯತ್ನಗಳನ್ನು ಶ್ಲಾಘಿಸಿದ ಮೋದಿ, ಸಂಪೂರ್ಣ ಫಿಟ್ ಆಗಲು ಅವರು ಇನ್ನೂ ಸ್ವಲ್ಪ ತೂಕ ಇಳಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಬಿಹಾರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಬಿಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಇದರ ಬಳಿಕ ತೇಜಸ್ವಿ ಯಾದವ್ ಅವರು ಕ್ರಿಕೆಟ್ ಆಡುವ ಮತ್ತು ಬರಿ ಕೈಗಳಿಂದ ಕಾರು ಎಳೆದು ಕಸರತ್ತು ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ