ಆ್ಯಪ್ನಗರ

22 ವರ್ಷದವನಿಗೆ ಜಿಮ್‌ನಲ್ಲಿ ಭಾರ ಎತ್ತುವ ವೇಳೆ ಹೃದಯಾಘಾತ

ಜಿಮ್‌ನಲ್ಲಿ ಭಾರ ಎತ್ತುವ ವೇಳೆ ಹೃದಯಾಘಾತಕ್ಕೊಳಗಾದ 22 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

TIMESOFINDIA.COM 20 Jul 2018, 12:59 pm
ಮುಂಬಯಿ: ಜಿಮ್‌ನಲ್ಲಿ ಭಾರ ಎತ್ತುವ ವೇಳೆ ಹೃದಯಾಘಾತಕ್ಕೊಳಗಾದ 22 ವರ್ಷದ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
Vijaya Karnataka Web gym


ಕಳೆದ 5 ವರ್ಷದಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಅದ್ನನ್‌ ಮೆನನ್‌, ಅಂಧೇರಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಜುಲೈ 7ರಂದು ಜಿಮ್‌ನಲ್ಲಿ ಭಾರ ಎತ್ತುವ ವೇಳೆ ಹೃದಯಾಘಾತಕ್ಕೆ ಒಳಗಾದ ಮೆನನ್‌ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೃದಯಾಘಾತದ ವೇಳೆ ಕೆಲ ಹೊತ್ತು ಮಿದುಳಿಗೆ ಸರಿಯಾಗಿ ಆಮ್ಲಜನಕ ಸಿಕ್ಕಿರದ ಹಿನ್ನೆಲೆಯಲ್ಲಿ ಮಿದುಳಿನ ಕೋಶಗಳಿಗೂ ಗಂಭೀರವಾಗಿ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೆನನ್‌ನ್ನು ಮುಂಬಯಿ ಸೆಂಟ್ರಲ್‌ನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಈ ವೇಳೆ ಅದ್ನನ್‌ ಹೃದಯ ಸಂಪೂರ್ಣವಾಗಿ ತನ್ನ ಕೆಲಸ ನಿಲ್ಲಿಸಿತ್ತು. ಸಿಪಿಆರ್‌ ಮೂಲಕ ಆತನ ಹೃದಯ ಬಡಿತ ಮರು ಚಾಲನೆ ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಸುಮಾರು 10-12 ನಿಮಿಷ ಮೆನನ್‌ ಮಿದುಳು ಆಮ್ಲಜನಕದ ಕೊರತೆ ಅನುಭವಿಸಿದೆ. ಇದರಿಂದ ಕೋಶಗಳಿಗೆ ಹಾನಿಯಾಗಿವೆ. ಆದರೆ ಇದೀಗ ಮೆನನ್‌ ಮಾತುಗಳನ್ನು ಕೇಳುತ್ತಿದ್ದಾನೆ. ಹೇಳಿದ ವಿಚಾರಗಳನ್ನು ಗ್ರಹಿಸಿ, ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾನೆ. ಆದರೆ ಮೆನನ್‌ ಸಂಪೂರ್ಣವಾಗಿ ಮೊದಲಿನಂತೆ ಜೀವನ ನಡೆಸುವುದರ ಬಗ್ಗೆ ಖಚಿತ ಮಾಹಿತಿ ನೀಡುವುದು ಕಷ್ಟಕರ ಎಂದು ಡಾ. ಚಕೋರ್‌ ಹೇಳಿದ್ದಾರೆ. '

ಜಿಮ್‌ ವಿರುದ್ಧ ದೂರು ನೀಡಲು ಕುಟುಂಬಸ್ಥರು ಹಿಂದೆ ಸರಿದಿದ್ದು, ಅಷ್ಟು ದೊಡ್ಡ ಜಿಮ್‌ ನಡೆಸುವ ವೇಳೆ ವೈದ್ಯಕೀಯ ಸೌಲಭ್ಯ, ಡಾಕ್ಟರ್‌ಗಳನ್ನೂ ಅವರು ನೇಮಿಸಬೇಕಿತ್ತು ಎಂದು ಮೆನನ್‌ ಕುಟುಂಬದ ಸದಸ್ಯರು ಹೇಳಿಕೆ ನೀಡಿದ್ದಾರೆ.

ಏತನ್ಮಧ್ಯೆ ಮೆನನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ವಾಟ್ಸ್‌ಆ್ಯಪ್‌ಗಳಲ್ಲಿ ಆತನ ಸಾವಿನ ಸುದ್ದಿ ಹರಿದಾಡಿದೆ. ಅಲ್ಲದೆ ಜಿಮ್‌ನಲ್ಲಿ ಮೆನನ್‌ ಕುಸಿಯುವ ಸಿಸಿಟಿವಿ ವೀಡಿಯೋವೂ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಇಂದಿನ ದಿನದಲ್ಲಿ ಇಂತಹ ಸುಳ್ಳು ಸುದ್ದಿಗಳು ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿಸುತ್ತಿದೆ. ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಬ್ರಿಜೇಶ್‌ ಸಿಂಗ್‌ ಹೇಳಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ