ಆ್ಯಪ್ನಗರ

ವಾಟ್ಸಪ್‌ ಗ್ರೂಪ್‌ ಟ್ರಿಪಲ್‌ ಎಕ್ಸ್‌ ಗ್ರೂಪಿಗೆ ಮಹಿಳೆ ಸೇರ್ಪಡೆ: ಅಡ್ಮಿನ್ ಬಂಧನ

ಪಶ್ಚಿಮ ಬಂಗಾಳ ಮೂಲದ ಮುಸ್ತಾಖ್ ಅಲಿ ಶೇಖ್ ಎಂಬಾತ ಟ್ರಿಪಲ್ ಎಕ್ಸ್‌ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಮಹಿಳೆಯೋರ್ವರನ್ನು ಅದಕ್ಕೆ ಸೇರಿಸಿದ್ದ.

Vijaya Karnataka Web 27 Nov 2018, 5:23 pm
ಮುಂಬಯಿ: ವಾಟ್ಸಪ್‌ ಗ್ರೂಪ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ರವಾನಿಸುವ ಟ್ರಿಪಲ್‌ ಎಕ್ಸ್‌ ಗ್ರೂಪಿಗೆ ಮಹಿಳೆಯೊಬ್ಬರನ್ನು ಸೇರ್ಪಡೆ ಮಾಡಿದ ಅಡ್ನಿನ್‌ನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web whatsapp_edited


ಮಹಿಳೆಯೋರ್ವರ ಅನುಮತಿಯಿಲ್ಲದೆ ಅವರನ್ನು ಸೇರಿಸಿಕೊಂಡು, ಗ್ರೂಪ್‌ಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಅಡ್ಮಿನ್‌ನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮುಸ್ತಾಖ್ ಅಲಿ ಶೇಖ್ ಎಂಬಾತ ಟ್ರಿಪಲ್ ಎಕ್ಸ್‌ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಮಹಿಳೆಯೋರ್ವರನ್ನು ಅದಕ್ಕೆ ಸೇರಿಸಿದ್ದ. ಆತನ ಇತರ ಗೆಳೆಯರು ಕೂಡ ಗ್ರೂಪ್‌ನಲ್ಲಿದ್ದರು.

ಮಹಿಳೆ ಮೊದಲಿಗೆ ಅದ್ಯಾರೊ ಗೆಳೆಯರು ಚೇಷ್ಟೆ ಮಾಡುತ್ತಿದ್ದಾರೆ ಎಂದು ಸುಮ್ಮನಿದ್ದರು. ನಂತರ ಗ್ರೂಪ್‌ನಲ್ಲಿ ಅಶ್ಲೀಲ ಚಿತ್ರ ಮತ್ತು ವಿಡಿಯೋ ಹಾಕತೊಡಗಿದಾಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮುಸ್ತಾಖ್‌ನನ್ನು ಬಂಧಿಸಿದ್ದಾರೆ.

ವಿಚಾರಣೆ ನಡೆಸಿದಾಗ ಆತ ಗೊತ್ತಿಲ್ಲದೇ ಮಹಿಳೆಯ ಸಂಖ್ಯೆಯನ್ನು ಗ್ರೂಪ್‌ಗೆ ಸೇರಿಸಿದ್ದೆ. ಅದು ನನ್ನ ಸಹೋದರನ ವಾಟ್ಸಪ್ ಸಂಖ್ಯೆ ಎಂದು ಅಂದುಕೊಂಡಿದ್ದೆ ಎಂದಿದ್ದಾನೆ. ಮುಸ್ತಾಖ್‌ನ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಮುಸ್ತಾಖ್ ವಿರುದ್ದ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ