ಆ್ಯಪ್ನಗರ

ಅಪಹರಣದ ಕಥೆ ಕಟ್ಟಿ ಸಿಕ್ಕಿಬಿದ್ದ ಯುವಕ

ಸ್ವತಃ ಅಪಹರಣವಾಗಿದ್ದು, ಹಣ ತಂದು ಬಿಡಿಸಿಕೊಳ್ಳುವಂತೆ ಗೆಳತಿಯ ಬಳಿ ಕಥೆ ಕಟ್ಟಿದ್ದ ಯುವಕನೋರ್ವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

Navbharat Times 14 Jun 2018, 5:53 pm
ಗಾಜಿಯಾಬಾದ್: ಸ್ವತಃ ಅಪಹರಣವಾಗಿದ್ದು, ಹಣ ತಂದು ಬಿಡಿಸಿಕೊಳ್ಳುವಂತೆ ಗೆಳತಿಯ ಬಳಿ ಕಥೆ ಕಟ್ಟಿದ್ದ ಯುವಕನೋರ್ವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಈಗಾಗಲೇ ಮದುವೆಯಾಗಿರುವ ಯುವಕನೋರ್ವ ಗೆಳತಿಯನ್ನು ಹೊಂದಿದ್ದು, ಆಕೆಯ ಬಳಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದ.
Vijaya Karnataka Web kidnap story


ಗೆಳತಿ ಮದುವೆಗೆ ಒತ್ತಾಯಿಸುತ್ತಿದ್ದರಿಂದ ಆಕೆಯ ಗಮನ ತಪ್ಪಿಸಲು ಅಭಿಜಿತ್ ತಿವಾರಿ ಎಂಬಾತ ತಾನೇ ಅಪಹರಣವಾಗಿರುವ ಕಥೆ ಸೃಷ್ಟಿಸಿದ್ದ. ತನ್ನದೇ ಮೊಬೈಲ್‌ನಿಂದ ಆಕೆಗೆ ಸಂದೇಶ ಕಳುಹಿಸಿದ್ದು, ಅಪಹರಣಕಾರರ ಕೈಯಿಂದ ಬಿಡುಗಡೆ ಮಾಡಲು 20,000 ರೂ. ನೀಡಬೇಕೆಂದು ಹೇಳಿದ್ದ. ಇದರಿಂದ ಹೆದರಿದ ಗೆಳತಿ ಪೊಲೀಸರಿಗೆ ದೂರು ನೀಡಿದ್ದಳು.

ತನಿಖೆ ನಡೆಸಿದ ಪೊಲೀಸರು, ಆತನ ಮೊಬೈಲ್ ಸಂಖ್ಯೆ ಆಧರಿಸಿ ಅಭಿಜಿತ್‌ನನ್ನು ಪತ್ತೆಹಚ್ಚಿದ್ದು, ಸ್ವಯಂ ಅಪಹರಣ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಅಭಿಜಿತ್‌ಗೆ ಈಗಾಗಲೇ ಮದುವೆಯಾಗಿದ್ದು, ಅಲಹಾಬಾದ್‌ನಲ್ಲಿದ್ದ ಆತನ ಗೆಳತಿಯನ್ನು ಗಾಜಿಯಾಬಾದ್‌ಗೆ ಕರೆತಂದು ಬಾಡಿಗೆ ಮನೆಯಲ್ಲಿ ಇರಿಸಿದ್ದ. ನಂತರ ಆಕೆಯನ್ನು ಬಿಟ್ಟು ಹೋಗಿದ್ದು, ಅಪಹರಣವಾಗಿರುವುದಾಗಿ ಹೇಳಿದ್ದ. ಅಭಿಜಿತ್‌ನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

ಮೂಲ ವರದಿ: ನವಭಾರತ್‌ ಟೈಮ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ