ಆ್ಯಪ್ನಗರ

ದಿಲ್ಲಿ ಮೃಗಾಲಯದ ಸಿಂಹದ ಬೋನು ಪ್ರವೇಶಿಸಿದ ಯುವಕ ಬಚಾವ್‌!

ಕೆಲವು ವ್ಯಕ್ತಿಗಳು ಅದರಲ್ಲೂ ಯುವ ಸಮುದಾಯದವರು ಮಾಡುವ ಹುಚ್ಚಾಟಗಳು ಇತ್ತೀಚೆಗೆ ಜಾಸ್ತಿಯಾಗಿದೆ. ಬಿಹಾರದ ಯುವಕನೊಬ್ಬ ದಿಲ್ಲಿಯ ಮೃಗಾಲಯದ ಸಿಂಹದ ಮುಂದೆ ಜಿಗಿದಿದ್ದಾನೆ

Vijaya Karnataka Web 17 Oct 2019, 10:14 pm
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮೃಗಾಲಯದಲ್ಲಿ ಹುಚ್ಚಾಟವಾಡಿದ ಬಿಹಾರದ ಯುವಕನೊಬ್ಬ ಸಿಂಹದ ಬೋನಿಗೇ ಜಿಗಿದಿದ್ದಾನೆ. ಮಾತ್ರವಲ್ಲ, ಸಿಂಹಕ್ಕೇ ಕೀಟಲೆ ಮಾಡಲು ಮುಂದಾಗಿದ್ದಾನೆ! ಆದರೆ, ಯಾಕೋ ಸಿಂಹ ಇವನು ಹುಚ್ಚ ಎಂಬುದನ್ನು ಅರಿತೋ ಏನೋ ಸುಮ್ಮನೆ ಬಿಟ್ಟಿದೆ. ಕೂಡಲೇ ಸಿಬ್ಬಂದಿಗಳು ಕಾರ್ಯಾಚರಿಸಿ ಆ ಯುವಕನನ್ನು ಬಚಾವ್‌ ಮಾಡಿದ್ದಾರೆ!
Vijaya Karnataka Web ಮೃಗಾಲಯ
ಮೃಗಾಲಯ


ಗುರುವಾರ ಮಧ್ಯಾಹ್ನ 12.30ರ ಹೊತ್ತಿಗೆ ಈ ಘಟನೆ ನಡೆದಿದೆ. ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ ರೆಹಾನ್‌ ಖಾನ್‌ ಕುಡಿತದ ಮತ್ತಿನಲ್ಲಿಸಿಂಹವಿರುವ ಆವರಣಕ್ಕೆ ಜಿಗಿದಿದ್ದಾನೆ. ಸಿಂಹ ದೂರದಲ್ಲಿಆತನನ್ನು ನೋಡುತ್ತಿತ್ತು. ಅವನು ಕೂಡಾ ಸಿಂಹವನ್ನು ಕಿಚಾಯಿಸುತ್ತಿದ್ದ! ಅಷ್ಟು ಹೊತ್ತಿಗೆ ಹೊರಗಡೆ ಇದ್ದವರು ಬೊಬ್ಬೆ ಹೊಡೆದು ಅವನನ್ನು ಹೊರಗೆ ಬರುವಂತೆ ಹೇಳಿದರು. ಆದರೆ, ಅವರ ಮಾತಿಗೆ ಅವನು ಕಿವಿಗೊಡಲೇ ಇಲ್ಲ!ಅವನ ಕುಡಿತದ ಮತ್ತು ಎಷ್ಟು ವಿಪರೀತಕ್ಕೇರಿತ್ತೆಂದರೆ, ಅವನನ್ನು ರಕ್ಷಿಸಲೆಂದು ಸಿಬ್ಬಂದಿ ಗೇಟು ತೆಗೆದು ಒಳಪ್ರವೇಶಿದ ಕೂಡಲೇ ಅವನು ಸಿಂಹವಿದ್ದ ಜಾಗದ ಕಡೆಗೇ ಓಡತೊಡಗಿದ! ಕೊನೆಗೆ ಸಿಬ್ಬಂದಿ ಸಿಂಹಕ್ಕೇ ಅರಿವಳಿಕೆ ನೀಡಿ ಮತ್ತು ಬರಿಸಿ ಇವನನ್ನು ಹಿಡಿದರು. ಆದರೂ ಇವನ ಮತ್ತು ಇಳಿಯಲಿಲ್ಲ!

ದಿಲ್ಲಿಯ ಸೀಲಾಂಪುರದಲ್ಲಿವಾಸವಾಗಿರುವ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವನಿಗೆ ಸಣ್ಣ ಗಾಯವೂ ಆಗಿಲ್ಲ! ಅವನು ಮಾನಸಿಕ ಅಸ್ವಸ್ಥನಾಗಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.

2014ರ ಸೆಪ್ಟೆಂಬರ್‌ನಲ್ಲಿ ಇಂತಹುದೇ ಘಟನೆ ನಡೆದಿತ್ತು. ತನ್ನ ರಕ್ಷಣಾ ಬೇಲಿಯೊಳಗೆ ಪ್ರವೇಶಿಸಿದ್ದ ವ್ಯಕ್ತಿಯನ್ನು ಬಿಳಿ ಹುಲಿ ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಕೊಂದು ಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ