ಆ್ಯಪ್ನಗರ

ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ ಗೋ ಸಂತತಿ!

ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯವು ಆನ್‌ಲೈನ್‌ ಮೂಲಕ ಜಾನುವಾರು ಗಣತಿ ನಡೆಸಿದ್ದು, ರಾಷ್ಟ್ರದಲ್ಲಿ ಗೋ ಸಂತತಿ ಹೆಚ್ಚುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದೆ. ಆದರೆ ದೇಶೀಯ ತಳಿಯ ಗೋವುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.

Vijaya Karnataka Web 30 Oct 2019, 9:46 am
ಭಾರತೀಯರೆಲ್ಲರೂ ಖುಷಿ ಪಡುವ ವಿಚಾರವೆಂದರೆ ದೇಶದಲ್ಲಿ ಗೋ ಸಂತತಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಗೋವುಗಳ ಸಂಖ್ಯೆ ಸುಮಾರು 16 ಲಕ್ಷ ಹೆಚ್ಚಾಗಿವೆ. ಆದರೆ ವಾಸ್ತವದಲ್ಲಿ ದೇಸಿ ತಳಿಯ ಗೋವುಗಳಿಗೆ ಮನ್ನಣೆ ಸಿಗುತ್ತಿಲ್ಲ. ಕಳೆದ ಎಳು ವರ್ಷಗಳಲ್ಲಿ ದೇಶಾದ್ಯಂತ ವಿದೇಶಿ ಗೋವುಗಳ ಸಂಖ್ಯೆಯಲ್ಲಿ 27% ಹೆಚ್ಚಳ ದಾಖಲಾಗಿದ್ದರೆ ದೇಶೀಯ ಅಥವಾ ದೇಸಿ ತಳಿಯ ಗೋವುಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆ ಕಂಡು ಬಂದಿದೆ.
Vijaya Karnataka Web Cow


ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಅತಿಹೆಚ್ಚು ಗೋವುಗಳನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಬಿಹಾರ, ರಾಜಸ್ಥಾನ, ಜಾರ್ಖಂಡ್‌, ಅಸ್ಸಾಂ, ಛತ್ತೀಸ್‌ಗಢ ರಾಜ್ಯಗಳಲ್ಲಿ ಗೋವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ಮಹಾರಾಷ್ಟ್ರ, ಒಡಿಶಾ ರಾಜ್ಯಗಳಲ್ಲಿ ಗೋವುಗಳ ಸಂಖ್ಯೆ ಗಣನೀಯ ಇಳಿಕೆ ಕಂಡುಬಂದಿದೆ. ಇನ್ನು ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಬಹುತೇಕ ಯಥಾಸ್ಥಿತಿ ಕಂಡು ಬರುತ್ತಿದೆ. ಕಳೆದ 7 ವರ್ಷಗಳಿಗೆ ಹೋಲಿಸಿದರೆ ಶೇ.4.6ರಷ್ಟು ದೇಶದ ಒಟ್ಟಾರೆ ಜಾನುವಾರುಗಳ ಸಂಖ್ಯೆ ಏರಿಕೆಯಾಗಿದೆ. ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯವು ನಡೆಸಿದ ಜಾನುವಾರು ಗಣತಿಯಲ್ಲಿ ಈ ವಿಚಾರಗಳು ಬಹಿರಂಗಗೊಂಡಿವೆ. ಸುಮಾರು 6.6 ಲಕ್ಷ ಗ್ರಾಮಗಳಲ್ಲಿ ಈ ಗಣತಿಯನ್ನು ನಡೆಸಲಾಗಿದೆ.

ಐದು ಗಂಟೆ ಸರ್ಜರಿ ಮಾಡಿ ಆಕಳ ಹೊಟ್ಟೆಯಿಂದ ತೆಗೆದರು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್


ಆರ್‌ಎಸ್‌ಎಸ್‌ನವರು ಸಗಣಿ ಎತ್ತಿ, ಬೆರಣಿ ತಟ್ಟಿದ್ದಾರಾ?: ವಿಪಕ್ಷ ನಾಯಕ ಸಿದ್ದರಾಮಯ್ಯ

ಗೋಮೂತ್ರ ಸಂಶೋಧನೆಗೆ ಡಿಜಿಟಲ್‌ ಸ್ಪರ್ಶ ನೀಡಿದ ಕೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ