ಆ್ಯಪ್ನಗರ

ಲೋಕಸಭೆ ಚುನಾವಣೆ 2019: ಯಾರಿಗೆ ಸಾಲ ಮನ್ನಾ ಲಾಭ?

ಸಾಲ ಮನ್ನಾ ಯೋಜನೆಗಳಿಂದ ರಾಷ್ಟ್ರದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬೀಳಲಿದೆ ಎಂದು ರಘುರಾಮ್‌ ರಾಜನ್‌ ಸೇರಿದಂತೆ ಅನೇಕ ವಿತ್ತ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ ಪ್ರತಿಪಕ್ಷಗಳ ಸಾಲಮನ್ನಾಗೇ ಒತ್ತು ನೀಡುತ್ತಿವೆ.

Vijaya Karnataka Web 9 Mar 2019, 12:47 pm
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಬತ್ತಳಿಕೆಯಲ್ಲಿ ಚುನಾವಣೆ ಅಸ್ತ್ರಗಳು ಒಂದೊಂದಾಗಿ ಸಿದ್ಧಗೊಳ್ಳುತ್ತಿವೆ. ಈ ಪೈಕಿ ರೈತರ ಸಾಲ ಮನ್ನಾ ಅತ್ಯಂತ ಹೆಚ್ಚು ಸದ್ದು ಮಾಡಲಿದೆ ಎನ್ನಲಾಗಿದೆ. ಆರಂಭದಲ್ಲಿ ಕೆಲವು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ಬಿಜೆಪಿ ಇತ್ತೀಚೆಗೆ ಯು-ಟರ್ನ್‌ ಹೊಡೆದಿದೆ. ಸಾಲ ಮನ್ನಾದಂತಹ ಪಾಪವನ್ನು ನಾನು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಚುನಾವಣಾ ರ್ಯಾಲಿಯೊಂದರಲ್ಲಿ ಹೇಳಿಕೆ ನೀಡಿದ್ದರು. ಸಾಲ ಮನ್ನಾ ಯೋಜನೆಗಳಿಂದ ರಾಷ್ಟ್ರದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬೀಳಲಿದೆ ಎಂದು ರಘುರಾಮ್‌ ರಾಜನ್‌ ಸೇರಿದಂತೆ ಅನೇಕ ವಿತ್ತ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದರೆ ಪ್ರತಿಪಕ್ಷಗಳ ಸಾಲಮನ್ನಾಗೇ ಒತ್ತು ನೀಡುತ್ತಿವೆ.
Vijaya Karnataka Web Farmers in India


ಸಾಲ ಮನ್ನಾ ಹೇಗೆ ವಿಫಲವಾಗುತ್ತಿದೆ ಎಂಬುದಕ್ಕೆ ಕರ್ನಾಟಕ ಮೈತ್ರಿ ಸರಕಾರವನ್ನು ಬೊಟ್ಟು ಮಾಡಲಾಗುತ್ತಿದೆ. ಆದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಷ್ಟ್ರದ ಎಲ್ಲ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನ ಕಾಂಗ್ರೆಸ್‌ ನೀಡಿದೆ. ಒಟ್ಟಾರೆ ಸಾಲ ಮನ್ನಾ ಯೋಜನೆ ಅಸ್ತ್ರಗಳು ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬ ಕುತೂಹಲ ಮನೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ