ಆ್ಯಪ್ನಗರ

ಮೇಕ್‌ ಇನ್‌ ಇಂಡಿಯಾದಿಂದ ಎಂಜಿನ್‌ಲೆಸ್‌ ರೈಲಿನ ಕರಾಮತ್ತು!

ಎಂಜಿನ್‌ ಇಲ್ಲದಿದ್ದರೆ ರೈಲು ಓಡುವುದು ಹೇಗೆ? ಭಾರತ ಮಾಡುತ್ತಿದೆ ಮ್ಯಾಜಿಕ್‌!

Vijaya Karnataka Web 24 Oct 2018, 2:22 pm
ಸ್ವದೇಶಿ ನಿರ್ಮಿತ ಟಿ-18 ರೈಲಿಗೆ ಸಾಂಪ್ರದಾಯಿಕ ಮಾದರಿಯ ಎಂಜಿನ್‌ ಇರುವುದಿಲ್ಲ. ಇದನ್ನು ಸೆಲ್ಫ್‌-ಪ್ರೊಪೆಲ್ಡ್‌ ಎಂಜಿನ್‌ಲೆಸ್‌ ಟ್ರೈನ್‌ ಎನ್ನುತ್ತಾರೆ. ಮೆಟ್ರೋ ರೈಲುಗಳ ಮಾದರಿಯಲ್ಲಿ ವಿದ್ಯುತ್‌ ಚಾಲಿತ ಮೋಟಾರ್‌ ತಂತ್ರಜ್ಞಾನದ ವ್ಯವಸ್ಥೆ ಇದರಲ್ಲಿದೆ. ಇದರಿಂದ ಇಂಧನ ಉಳಿತಾಯವಾಗುತ್ತದೆ. ಇಲ್ಲಿ ಚಾಲಕ ಶಕ್ತಿ ವಿದ್ಯುತ್‌. ಎಲೆಕ್ಟ್ರಿಕ್‌ ಮೋಟಾರ್‌ಗಳನ್ನು ಒಳಗೊಂಡಿರುವ, ಎಲೆಕ್ಟ್ರಿಕ್‌ ಮಲ್ಟಿಪಲ್‌ ಯುನಿಟ್‌ ತಂತ್ರಜ್ಞಾನ ವ್ಯವಸ್ಥೆಯಲ್ಲಿ ವಿದ್ಯುತ್‌ಅನ್ನು ಬಳಸಿಕೊಂಡು ರೈಲು ಸಂಚರಿಸುತ್ತದೆ. ಇದಕ್ಕೆ ಪ್ರತ್ಯೇಕ ಎಂಜಿನ್‌ನ ಅಗತ್ಯವಿಲ್ಲ. ಪ್ರತಿ ಪರ್ಯಾಯ ಬೋಗಿಯಲ್ಲೂ ಮೋಟಾರ್‌ ಚಾಲಿತ ವ್ಯವಸ್ಥೆ ಇರುತ್ತದೆ. ಚಾಲನೆಯ ಶಕ್ತಿಯನ್ನೂ ಇದು ವಿಕೇಂದ್ರೀಕರಿಸುತ್ತದೆ. ಟ್ರ್ಯಾಕ್ಷನ್‌ ಮೋಟಾರ್‌ ಬೋಗಿಯ ಭಾಗವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ