ಆ್ಯಪ್ನಗರ

ನೆಹರು/ಗಾಂಧಿಯ ಮತ್ತೊಂದು ತಲೆಮಾರಿಗೆ ಪಕ್ಷದ ಚುಕ್ಕಾಣಿ

ಅವಿರೋಧವಾಗಿ ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವರು ನೆಹರು/ಗಾಂಧಿ ಕುಟುಂಬದ 5ನೇ ವ್ಯಕ್ತಿಯಾಗಿ ಆಯ್ಕೆಗೊಳ್ಳುವುದು ಖಚಿತ

Vijaya Karnataka Web 7 Dec 2017, 5:07 pm
ಕಾಂಗ್ರೆಸ್‌ ಪಕ್ಷವು ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಸಿದ್ಧತೆ ನಡೆಸಿದೆ. ನೆಪ ಮಾತ್ರ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಉಸಿರೆತ್ತಿದೆಯಾದರೂ, ಎಲ್ಲ ನಾಮನಿರ್ದೇಶನಗಳು ರಾಹುಲ್‌ ಗಾಂಧಿ ಅವರತ್ತಲೇ ಬೊಟ್ಟು ಮಾಡಿವೆ. ಈ ಹಿನ್ನೆಲೆ ಅವಿರೋಧವಾಗಿ ಕಾಂಗ್ರೆಸ್‌ ಅಧ್ಯಕ್ಷರಾಗಿ ನೆಹರು/ಗಾಂಧಿ ಕುಟುಂಬದ 5ನೇ ವ್ಯಕ್ತಿಯಾಗಿ ಆಯ್ಕೆಗೊಳ್ಳಲಿದ್ದಾರೆ. 1998ರಲ್ಲಿ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಬರೋಬ್ಬರಿ 19 ವರ್ಷಗಳ ಕಾಲ ಪಕ್ಷದ ಚುಕ್ಕಾಣಿ ಹಿಡಿಯುವ ಮೂಲಕ ಅತಿಹೆಚ್ಚು ವರ್ಷ ಅಧ್ಯಕ್ಷರಾದ ದಾಖಲೆಗೆ ಪಾತ್ರರಾಗಿದ್ದಾರೆ. ಅತ್ತ ಪಕ್ಷದ ಅಧ್ಯಕ್ಷರಾಗಿಯೂ, ಇತ್ತ ರಾಷ್ಟ್ರದ ಪ್ರಧಾನ ಮಂತ್ರಿಯಾಗಿಯೂ ನೆಹರು/ಗಾಂಧಿ ಕುಟುಂಬದ ಅಧಿಕಾರ ಚಲಾವಣೆಯ ಅವಧಿಯತ್ತ ಕಣ್ಣು ಹಾಯಿಸಿದಾಗ ಕಂಡುಬಂದಿದಿಷ್ಟು.
Vijaya Karnataka Web gandhis era in congress
ನೆಹರು/ಗಾಂಧಿಯ ಮತ್ತೊಂದು ತಲೆಮಾರಿಗೆ ಪಕ್ಷದ ಚುಕ್ಕಾಣಿ






ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ