ಆ್ಯಪ್ನಗರ

ವಿಶ್ವದಲ್ಲಿ ಅತಿ ಹೆಚ್ಚು ಕಲುಷಿತ ನಗರಗಳಿರೋದು ಭಾರತದಲ್ಲೇ!

ಪಾಕಿಸ್ತಾನದ ಫೈಸಲಾಬಾದ್‌ ಹಾಗೂ ಲಾಹೋರ್‌ ವಿಶ್ವದ ಟಾಪ್‌ 10 ಲಿಸ್ಟ್‌ನಲ್ಲಿ 2ನೇ ಹಾಗೂ 10ನೇ ಸ್ಥಾನ ಪಡೆದಿದ್ದರೆ, ಹರಿಯಾಣದ ಗುರುಗ್ರಾಮ​​ ಟಾಪ್‌ 10ನಲ್ಲಿ ಮೊದಲ ಸ್ಥಾನದಲ್ಲಿದೆ.

Vijaya Karnataka Web 5 Mar 2019, 8:16 pm
ಹೊಸದಿಲ್ಲಿ: ವಿಶ್ವದ ಪ್ರಮುಖ 10 ಕಲುಷಿತ ನಗರಗಳಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದುಕೊಂಡಿದೆ.
Vijaya Karnataka Web pollution


10 ನಗರಗಳಲ್ಲಿ ಸರಾಸರಿ ಪಿಎಂ ಸಾಂದ್ರತೆ 2.5 ಗಿಂತ ಹೆಚ್ಚಿದ್ದು, ಪಾಕಿಸ್ತಾನದ 2 ಹಾಗೂ ಚೀನಾದ 1 ನಗರ ಅತಿ ಹೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ ರಾಷ್ಟ್ರ ರಾಜಧಾನಿ ದಿಲ್ಲಿ, ವಿಶ್ವದಲ್ಲೇ ಅತಿ ಹೆಚ್ಚು ಕಲುಷಿತಗೊಂಡ ರಾಜಧಾನಿ ಎಂದು ಹೆಸರುಗಳಿಸಿದೆ.

ಪಾಕಿಸ್ತಾನದ ಫೈಸಲಾಬಾದ್‌ ಹಾಗೂ ಲಾಹೋರ್‌ ವಿಶ್ವದ ಟಾಪ್‌ 10 ಲಿಸ್ಟ್‌ನಲ್ಲಿ 2ನೇ ಹಾಗೂ 10ನೇ ಸ್ಥಾನ ಪಡೆದಿದ್ದರೆ, ಹರಿಯಾಣದ ಗುರುಗ್ರಾಮ ಟಾಪ್‌ 10ನಲ್ಲಿ ಮೊದಲ ಸ್ಥಾನದಲ್ಲಿದೆ. ಇದಲ್ಲದೆ ಭಾರತದ ಗಾಜಿಯಾಬಾದ್‌, ಭಿವಡಿ, ನೋಯ್ಡಾ, ಫರೀದಾಬಾದ್‌, ಪಟನಾ, ಲಖನೌ ನಗರಗಳು ಹೆಚ್ಚು ಕಲುಷಿತಗೊಂಡಿರುವುದು ಗೊತ್ತಾಗಿದೆ.

ಪಿಎಂ ಸಾಂದ್ರತೆ ಹೆಚ್ಚಿದ್ದರೆ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆಗಳೂ ಬರುತ್ತವೆ. ಅತೀ ಹೆಚ್ಚು ಕಲುಷಿತ ಗಾಳಿ ಇರುವ ಭಾಗದಲ್ಲಿ ವಾಸಿಸುವ 10 ಜನರ ಪೈಕಿ 9 ಮಂದಿ ಅತ್ಯಂತ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಪ್ರತಿ ವರ್ಷ 7 ಕೋಟಿ ಜನರು ವಾಯು ಮಾಲಿನ್ಯದಿಂದ ಉಂಟಾಗುವ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ