ಆ್ಯಪ್ನಗರ

ಇಎನ್‌ಟಿ ವೈದ್ಯ ಸೇರಿ 8 ಜನರಿಗೆ ಸೋಂಕು

ನಗರದಲ್ಲಿಬುಧವಾರ ಒಂದೇ ದಿನ ಎಂಟು ಜನರಲ್ಲಿಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಓರ್ವ ಗಂಟಲು, ಮೂಗು ಮತ್ತು ಕಿವಿ (ಇಎನ್‌ಟಿ) ತಜ್ಞ ವೈದ್ಯರೂ ಇದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿಕೋವಿಡ್‌ ಸೋಂಕಿತರ ಸಂಖ್ಯೆ 81ಕ್ಕೆ ತಲುಪಿದೆ. ಇದೇವೇಳೆ, ಎಂಟು ಜನರಲ್ಲಿ60 ವರ್ಷದ ಸೋಂಕಿತ ಪಿ-927) ವೃದ್ಧರೊಬ್ಬರು ಮೇ 11ರಂದು ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದು, ಇದರಿಂದಾಗಿ ಕೋವಿಡ್‌ ಸೋಂಕಿತ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ7ಕ್ಕೆ ಏರಿದಂತಾಗಿದೆ.

Vijaya Karnataka 14 May 2020, 9:49 pm
ಕಲಬುರಗಿ:ನಗರದಲ್ಲಿಬುಧವಾರ ಒಂದೇ ದಿನ ಎಂಟು ಜನರಲ್ಲಿಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಓರ್ವ ಗಂಟಲು, ಮೂಗು ಮತ್ತು ಕಿವಿ (ಇಎನ್‌ಟಿ) ತಜ್ಞ ವೈದ್ಯರೂ ಇದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿಕೋವಿಡ್‌ ಸೋಂಕಿತರ ಸಂಖ್ಯೆ 81ಕ್ಕೆ ತಲುಪಿದೆ. ಇದೇವೇಳೆ, ಎಂಟು ಜನರಲ್ಲಿ60 ವರ್ಷದ ಸೋಂಕಿತ ಪಿ-927) ವೃದ್ಧರೊಬ್ಬರು ಮೇ 11ರಂದು ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದು, ಇದರಿಂದಾಗಿ ಕೋವಿಡ್‌ ಸೋಂಕಿತ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ7ಕ್ಕೆ ಏರಿದಂತಾಗಿದೆ.
Vijaya Karnataka Web  8
ಇಎನ್‌ಟಿ ವೈದ್ಯ ಸೇರಿ 8 ಜನರಿಗೆ ಸೋಂಕು


ಕಲಬುರಗಿ ನಗರದ ಮೆಡಿಕಲ್‌ ರೆಪ್ರೆಸೆಂಟೆಟಿವ್‌ ರೋಗಿ ಸಂಖ್ಯೆ-848 ಸಂಪರ್ಕಕ್ಕೆ ಬಂದ ಖೂಬಾ ಪ್ಲಾಟ್‌ ಬಡಾವಣೆಯ 45 ವರ್ಷದ ಪುರುಷ ಇಎನ್‌ಟಿ ತಜ್ಞರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೊಂದೆಡೆ ಇದೇ ಎಂ.ಆರ್‌. ಸಂಪರ್ಕಕ್ಕೆ ಬಂದ ಮೋಮಿನಪುರದ 30 ವರ್ಷದ ಮಹಿಳೆ ಪಿ-953 ಸಹ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೋವಿಡ್‌ ಬುಲೆಟಿನ್‌ ತಿಳಿಸಿದೆ.

ಈ ಮಧ್ಯೆ, ಮುಂಬಯಿ ನಗರದಲ್ಲಿಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಕಮಲಾಪುರ ತಾಲೂಕಿನ ಕವನಳ್ಳಿ ತಾಂಡಾದ ಪಿ-806ಗೆ ಕೊರೊನಾ ಸೋಂಕು ತಗುಲಿರುವುದು ಮೇ 10ರಂದು ದೃಢಪಟ್ಟಿತ್ತು. ಇದೀಗ ಈ ವ್ಯಕ್ತಿಯ ಸಂಪರ್ಕಕ್ಕೆ ಬಂದ ನಾಲ್ವರು ಮಹಿಳೆಯರಾದ 42 ವರ್ಷದ ಪಿ-952, 28 ವರ್ಷದ ಪಿ-955, 15 ವರ್ಷದ ಯುವತಿ ಪಿ-956 ಮತ್ತು 35 ವರ್ಷದ ಪಿ-957 ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೋವಿಡ್‌ ಬುಲೆಟಿನ್‌ ದೃಢಪಡಿಸಿದೆ.

ಗಮನಾರ್ಹ ಅಂಶವೆಂದರೆ, ಇತ್ತೀಚೆಗೆ ಕಮಲಾಪುರ ಸಮೀಪದ ಕವನಳ್ಳಿ ತಾಂಡಾದ ವ್ಯಕ್ತಿ ಪಿ-806ಗೆ ಸೋಂಕು ತಗುಲಿದ ಕಾರಣಕ್ಕಾಗಿ ಆತನನ್ನು ಇರಿಸಲಾಗಿದ್ದ ತಾಲೂಕಿನ ಮುದ್ದಡಗಿ ಸಮೀಪದ ಬಾಲಕರ ಸರಕಾರಿ ವಸತಿ ನಿಲಯದಲ್ಲಿದ್ದ ಎಲ್ಲ58 ಜನರನ್ನು ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ ಹಾಸ್ಟೆಲ್‌ ಸೀಲ್‌ಡೌನ್‌ ಮಾಡಲಾಗಿತ್ತು. ಈ ಹಾಸ್ಟೆಲ್‌ನಲ್ಲಿದ್ದ ನಾಲ್ವರು ಮಹಿಳೆಯರಿಗೆ ಈಗ ಸೋಂಕು ತಗುಲಿದೆ.

ಸಾವಿನ ಸಂಖ್ಯೆ 7ಕ್ಕೆ ಏರಿಕೆ


ಕಲಬುರಗಿ ಜಿಲ್ಲೆಯಲ್ಲಿಮೇ 11ರಂದು ನಗರದ ಮೋಮಿನ್‌ಪುರದ 60 ವರ್ಷದ ವ್ಯಕ್ತಿ ಪಿ-927 ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. 11ರಂದು ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆತ ಮಾರ್ಗಮಧ್ಯೆ ಮೃತಪಟ್ಟಿದ್ದರು. ಬಳಿಕ ಕೊರೊನಾ ಸೋಂಕು ತಪಾಸಣೆಗಾಗಿ ಮಾದರಿ ಸಂಗ್ರಹಿಸಿ ಕಳುಹಿಸಲಾಗಿತ್ತು. ಬುಧವಾರ ಈ ವ್ಯಕ್ತಿಗೂ ಸೋಂಕು ತಗುಲಿತ್ತು ಎಂಬುದು ದೃಢಪಟ್ಟಿದೆ. ಹೀಗಾಗಿ, ಜಿಲ್ಲೆಯಲ್ಲಿಕೋವಿಡ್‌ ಸಂಬಂಧಿತ ಸಾವಿನ ಸಂಖ್ಯೆ 7ಕ್ಕೆ ತಲುಪಿದೆ.

ಜಿಲ್ಲೆಯ ಈವರೆಗಿನ ಅಂಕಿ ಅಂಶಗಳ ಪ್ರಕಾರ, 81 ಸೋಂಕಿತರಲ್ಲಿ7 ಮಂದಿ ಸಾವನ್ನಪ್ಪಿದ್ದಾರೆ. 44 ವ್ಯಕ್ತಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 24 ವ್ಯಕ್ತಿಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ