ಆ್ಯಪ್ನಗರ

ಕಲಬುರಗಿಯಲ್ಲಿ ಮತ್ತೆ 11 ಮಂದಿಗೆ ಕೊರೊನಾ: 125ಕ್ಕೇರಿದ ಜಿಲ್ಲೆಯ ಸೋಂಕಿತರ ಸಂಖ್ಯೆ!

ಕಲಬುರಗಿಯಲ್ಲಿ ಈಗ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಗಗನಮುಖಿ ಆಗುತ್ತಿದೆ. ಇಂದು ಪುನಃ 11 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.

Vijaya Karnataka Web 19 May 2020, 1:38 pm
ಕಲಬುರಗಿ: ಕೊರೊನಾ ಸಂಬಂಧಿತ ಮೊದಲ ಸಾವಿಗೆ ಸಾಕ್ಷಿಯಾಗಿ ಇಡೀ ದೇಶದಲ್ಲಿ ದಿಗ್ಭ್ರಮೆ ಮೂಡಿಸಿದ್ದ ಜಿಲ್ಲೆಯಲ್ಲಿ ಈಗ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ಗಗನಮುಖಿ ಆಗುತ್ತಿದೆ. ಇಂದು ಪುನಃ 11 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.
Vijaya Karnataka Web lockdown


ಇಂದು ಏಳು ವರ್ಷದ ಬಾಲಕ ಪಿ-1257, 42 ವರ್ಷದ ವ್ಯಕ್ತಿ ಪಿ-1258, 18 ವರ್ಷದ ಯುವತಿ ಪಿ-1259, 8 ವರ್ಷದ ಬಾಲಕಿ ಪಿ-1260, 35 ವರ್ಷದ ಮಹಿಳೆ ಪಿ-1261, 32 ವರ್ಷದ ಪುರುಷ ಪಿ-1262, 21 ವರ್ಷದ ಯುವತಿ ಪಿ- 1263, 40 ವರ್ಷದ ವ್ಯಕ್ತಿ ಪಿ-1264, 30 ವರ್ಷದ ಮಹಿಳೆ ಪಿ-1265, 30 ವರ್ಷದ ಮಹಿಳೆ ಪಿ-1266 ಹಾಗೂ 32 ವರ್ಷದ ವ್ಯಕ್ತಿ ಪಿ-1267 ಸೋಂಕಿಗೆ ಒಳಗಾದವರು.

ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಬೆಳಕಿಗೆ ಬರುತ್ತಿರುವ ಸೋಂಕು ಪ್ರಕರಣಗಳಲ್ಲಿ ಬಹುತೇಕ ಮಹಾರಾಷ್ಟ್ರದ ಮುಂಬೈ, ಪುಣೆ, ಗುಜರಾತಿನ ಅಹ್ಮದಾಬಾದ್ ಮತ್ತು ತೆಲಂಗಾಣ ರಾಜಧಾನಿ ಹೈದರಾಬಾದ್ ಪ್ರವಾಸದ ಹಿನ್ನೆಲೆ ಹೊಂದಿರುವ ಅತಿಥಿ ಕಾರ್ಮಿಕರ ಪಾಲಿನ ಪ್ರಮಾಣವೇ ಹೆಚ್ಚಾಗಿದೆ.

ಕೊರೊನಾಗೆ ವಿಜಯಪುರದ 65 ವರ್ಷದ ವೃದ್ಧ ಸಾವು: ಜಿಲ್ಲೆಯಲ್ಲಿ 4ನೇ ಬಲಿ

ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅತಿಥಿ ಕಾರ್ಮಿಕರು ಜಿಲ್ಲೆಗೆ ವಾಪಸ್ ಆಗಿದ್ದಾರೆ. ಈ ಎಲ್ಲ ಕಾರ್ಮಿಕರನ್ನು ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿದೆ. ಈ ಕಾರ್ಮಿಕರ ಪೈಕಿ ಈವರೆಗೆ 24 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಧ್ಯೆ ಇಂದು ಹೊಸದಾಗಿ 11 ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಸೋಂಕು ತಗುಲಿದ ಅತಿಥಿ ಕಾರ್ಮಿಕರ ಸಂಖ್ಯೆ 36ಕ್ಕೆ ತಲುಪಿದಂತಾಗಿದೆ.

ಕರ್ನಾಟಕದಲ್ಲಿ ಕೊರೊನಾ ಸೆಂಚುರಿ, ಒಂದೇ ದಿನ 127 ಕೇಸ್‌, 3 ಸಾವು; ಮಂಡ್ಯ 62, ದಾವಣೆಗೆರೆ 19!

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೀಗೆ ದಿಢೀರ್ ಹೆಚ್ಚಳ ಆಗುತ್ತಿರುವುದು ಜಿಲ್ಲೆಯ ಹಳ್ಳಿ ಮತ್ತು ತಾಂಡಾಗಳಿಗೂ ಸೋಂಕು ವ್ಯಾಪಿಸುವಂತೆ ಮಾಡಿದೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ದಿಗಿಲು ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ